ಸಿದು ಡಿಸಿಎಂ ಹುದ್ದೆ ಕೇಳಲಿಲ್ಲ : ಪತ್ನಿ
ಅಮೃತಸರ್, ಮಾ. 12: ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿದು ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳಿಲ್ಲ ಎಂದು ಸಿದು ಪತ್ನಿ ನವಜೋತ್ ಕೌರ್ ಸಿದು ಹೇಳಿದ್ದಾರೆ. ಪಾರ್ಟಿ ಹೇಳುವಂತೆ ಅವರಿಬ್ಬರೂನಡೆದುಕೊಳ್ಳುತ್ತಾರೆ ಎಂದು ಕೌರ್ ಅಮೃತಸರದಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ರಾಜಕೀಯದಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ಸಿನ ಗೆಲವು ಬಿಜೆಪಿಗಾದ ತಿರುಗೇಟಲ್ಲ ಎಂದು ಕೌರ್ ಹೇಳಿದರು.
ಚುನಾವಣೆಯಲ್ಲಿ ಗೆದ್ದರೆ ಸಿದು ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳುವರು ಎಂದು ಸುದ್ದಿಯಾಗಿತ್ತು. ಇದಕ್ಕೆ ಚುನಾವಣಾ ವಿಜಯದ ಬಳಿಕ ಕೌರ ಉತ್ತರ ನೀಡಿದರು. ಕಾಂಗ್ರೆಸ್ ಸೇರುವಾಗ ಯಾವ ಸ್ಥಾನವನ್ನು ನಾವು ಆಗ್ರಹಿಸಿಲ್ಲ ಎಂದು ಕೌರ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ನೀತಿಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ವಿಜಯವನ್ನು ತಿರುಗೇಟು ಎನ್ನಲಾಗದು. ಅಕಾಲಿದಳದ ದುರಾಡಳಿತಕ್ಕೆ ತಿರುಗೇಟಾಗಿದೆ. ಮಾದಕವಸ್ತು, ಮಾಫಿಯ ದಮನಿಸುವುದು, ನಿರುದ್ಯೋಗವನ್ನು ಪರಿಹರಿಸುವುದು, ಪೊಲೀಸರಲ್ಲಿ ಸುಧಾರಣೇ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಂಗ್ರೆಸ್ ಸರಕಾರದ ಮೊದಲ ಗುರಿಯಾಗಿದೆ.
ಮಂತ್ರಿಮಂಡಲದಲ್ಲಿ ನೀವು ಉಪಮುಖ್ಯಮಂತ್ರಿಯಾಗುವಿರೇ ಎಂದು ಪ್ರಶ್ನಿಸಿದಾಗ ಅದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಕೌರ್ ಹೇಳಿದ್ದಾರೆ. ಆದರೆ, ಸಿದುವಿನಂತಹ ಜನಪ್ರಿಯತೆ ಇರುವ ನಾಯಕಲಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆಂದು ವರದಿ ತಿಳಿಸಿದೆ.