ಚುನಾವಣೆಗೆ ಸ್ಪರ್ಧಿಸದಂತೆ ತನ್ನ ಮೇಲೆ ಒತ್ತಡವಿದೆ: ದೀಪಾ ಜಯಕುಮಾರ್
ಚೆನ್ನೈ,ಮಾ. 13; ಉಪಚುನಾವಣೆಯಲ್ಲಿ ಆರ್‌ಕೆನಗರದಿಂದ ಸ್ಪರ್ಧಿಸದಂತೆ ತನಗೆ ಒತ್ತಡ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಜಯಲಲಿತಾರ ಸಹೋದರ ಪುತ್ರಿ ದೀಪಾ ಜಯಕುಮಾರ್ ತಿಳಿಸಿದ್ದಾರೆ.
ಆರ್‌ಕೆ ನಗರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದ ಬಳಿಕ ತನಗೆ ಹಲವು ರೀತಿಯ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಎಐಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ವಿಭಾಗದಿಂದ ತನ್ನ ಮೇಲೆ ಒತ್ತಡ ಹೇರುವ ಶ್ರಮ ನಡೆಯುತ್ತಿದೆ ಎಂದು ದೀಪಾ ಹೇಳಿದರು.
ತನ್ನ ಮನೆಯಲ್ಲಿಕೂಡಾ ತಾನು ಸ್ವಸ್ಥಳಲ್ಲ. ಹಲವು ಕಡೆಗಳಿಂದ ತಾನು ಒತ್ತಡ ಎದುರಿಸುತ್ತಿದ್ದೇನೆ. ತಾನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಹಲವು ತಂತ್ರಗಳು ನಡೆಯುತ್ತಿವೆ. ಜಯಲಲಿತಾರನ್ನು ಆಸ್ಪತ್ರೆಯಲ್ಲಿರುವಾಗ ಭೇಟಿಯಾಗದಂತೆ ತಡೆದದ್ದು, ಅವರ ಅಂತ್ಯ ಸಂಸ್ಕಾರಗಳಲ್ಲಿ ತಾನು ಪಾಲ್ಗೊಳ್ಳದಂತೆ ತಡೆದದ್ದು ಎಲ್ಲವನ್ನು ದೀಪಾ ಬೆಟ್ಟು ಮಾಡಿದ್ದಾರೆ. ಜಯಲಲಿತಾರ ಸ್ಮೃತಿಕುಟೀರದಲ್ಲಿ ಕಳೆದ ದಿವಸ ದೀಪಾಜಯಕುಮಾರ್ ಪ್ರಾರ್ಥನೆ ಸಲ್ಲಿಸಿದ್ದರು.
ಫೆಬ್ರವರಿಯಲ್ಲಿ ದೀಪಾಜಯಕುಮಾರ್‌ರ ನೇತೃತ್ವದಲ್ಲಿ ಅಮ್ಮ ದೀಪಾ ಪೆರವೈ ಎನ್ನುವ ರಾಜಕೀಯ ಪಾರ್ಟಿ ಘೋಷಣೆಯಾಗಿತ್ತು. ಜಯಲಲಿತಾ ನಿಧನದೊಂದಿಗೆ ತೆರವಾದ ಆರ್‌ಕೆ ನಗರ್ ವಿಧಾನಸಭಾ ಕ್ಷೇತ್ರದಲ್ಲಿ ತಾನು ಸ್ಪರ್ಧಿಸುವೆ ಎಂದು ದೀಪಾ ಘೋಷಿಸಿದ್ದಾರೆಂದು ವರದಿ ತಿಳಿಸಿದೆ.