ನಂಡೆ ಪೆಂಙಲ್: ಕಣ್ಣೀರೊರೆಸುವ ಅಭಿಯಾನ
- ಸಾವಿರ ಕನಸುಗಳನ್ನು ನನಸು ಮಾಡುವ ವಿಶೇಷ ಯೋಜನೆ
- 30 ವರ್ಷ ಮೀರಿದರೂ ಮದುವೆಯಾಗದ ಹೆಣ್ಣು ಮಕ್ಕಳ ಪಾಲಿನ ಆಶಾಕಿರಣ
ಮಂಗಳೂರು, ಮಾ.16: ಒಂದೇ ಸೂರಿನಡಿ ಮೂವತ್ತರ ಹರೆಯ ಮೀರಿದ ಮೂರು-ನಾಲ್ಕು ಕುವರಿಯರು. ಬೀಡಿಯ ಸೂಪಿನಲ್ಲೇ ಕನಸು ಭಗ್ನವಾಗಿರುವ, ಭವಿಷ್ಯ ಅಯೋಮಯವಾಗಿರುವ ನೂರಾರು ಮನೆಗಳು, ಅತೀ ಹೆಚ್ಚು ಶ್ರೀಮಂತ ಮುಸ್ಲಿಮರಿರುವ, ಅತ್ಯಕ ವಿದ್ಯಾವಂತ ಮುಸ್ಲಿಮರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು, ಇದು ಕಲ್ಪನೆಯಲ್ಲ, ವಾಸ್ತವ! ಕಿತ್ತು ತಿನ್ನುವ ಬಡತನ, ಯಾರಲ್ಲೂ ಹೇಳಿಕೊಳ್ಳಲಾಗದ ಅಸಹಾಯಕತೆ, ಚಿಂತಿಸುತ್ತಾ ಚಿಂತಿಸುತ್ತಾ ಮಾನಸಿಕ ಖಿನ್ನತೆ, ನಿದ್ದೆಯೆಂಬುವುದನ್ನು ಮರೆತೇ ಬಿಟ್ಟ ಕಂಗಳು. ಇದಕ್ಕೆಲ್ಲಾ ಪರಿಹಾರವೆಂಬುದು ಇಲ್ಲವೇ...?
ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ನಂಡೆ ಪೆಂಙಲ್’ (ನನ್ನ ಸಹೋದರಿ) ಎಂಬ ಅಭಿಯಾನದೊಂದಿಗೆ ಸಮಾಜ ಸೇವೆಯನ್ನೇ ಗುರಿಯಾಗಿರಿಸಿರುವ ಟ್ಯಾಲೆಂಟ್ ರಿಸರ್ಚ್ ೌಂಡೇಶನ್ ಮುಂದಾಗಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಪ್ರಮುಖ ಸಮಾಜಸೇವಾ ಸಂಸ್ಥೆಗಳು, ಸಮಾಜ ಸೇವಕರು ಮತ್ತು ಸಾಮಾಜಿಕ ಕಾಳಜಿಯುಳ್ಳ ಶ್ರೀಮಂತರು ಸಹಭಾಗಿಗಳಾಗಿ ದುಡಿಯುತ್ತಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದೊಳಗೆ ಆಳವಾಗಿ ಬೇರು ಬಿಟ್ಟಿರುವ ವರದಕ್ಷಿಣೆ ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಈ ನಿಟ್ಟಿನಲ್ಲಿ ಟ್ಯಾಲೆಂಟ್ ರಿಸರ್ಚ್ ೌಂಡೇಶನ್ ಈ ಯೋಜಿತ ಅಭಿಯಾನಕ್ಕೆ ಮುಂದಾಗಿದೆ.
ಇಂದಿಗೂ ಇಲ್ಲಿನ ಮುಸ್ಲಿಮ್ ಸಮುದಾಯದಲ್ಲಿ ಬಯಕೆಗಳು ಕರಟಿದ, ಕನಸುಗಳು ಕಮರಿದ 40ರ ಹರೆಯವೂ ಮೀರಿದ ಬಹಳಷ್ಟು ಹೆಣ್ಣು ಜೀವಗಳಿಗೆ, ಅವರೊಳಗಿನ ಕರಟಿ ಹೋದ ಬಯಕೆಗಳಿಗೆ, ಕಮರಿ ಹೋದ ಕನಸುಗಳಿಗೆ ಮರುಜೀವ ಕೊಟ್ಟು ಅವರ ಮುಖದಲ್ಲೂ ಜೀವನೋತ್ಸಾಹದ ಮಂದಹಾಸ ಚಿಮ್ಮಿಸಬಲ್ಲ ಅಭಿಯಾನ ‘ನಂಡೆ ಪೆಂಙಲ್’. ಬರೇ ಜಾಗೃತಿ ಮೂಡಿಸುವಷ್ಟಕ್ಕೆ ತನ್ನ ಜವಾಬ್ದಾರಿ ಮುಗಿಯಿತೆಂದು ಈ ಅಭಿಯಾನ ಸುಮ್ಮನಾಗುವುದಿಲ್ಲ. ಇಲ್ಲಿನ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕೊಟ್ಟು ಸಮಸ್ಯೆಯ ಬಲಿಪಶುಗಳಿಗೆ ಹೊಸ ಜೀವನ ಕಲ್ಪಿಸಿಕೊಡುವುದು ‘ನಂಡೆ ಪೆಂಲ್’ ಅಭಿಯಾನದ ಉದ್ದೇಶ. ಇದಕ್ಕಾಗಿ ಅಭಿಯಾನದ ಕಾರ್ಯಕರ್ತರು, ಸಾಮಾಜಿಕ ಕಾಳಜಿಯುಳ್ಳವರು ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ. ಜಿಲ್ಲೆಯ ಪ್ರತೀ ಮುಸ್ಲಿಮ್ ಜಮಾಅತ್ಗಳಿಗೆ ಮುಖತಃ ಭೇಟಿ ನೀಡಿ ಅಲ್ಲೆಲ್ಲ ಸಮೀಕ್ಷೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಆಯಾ ಜಮಾಅತ್ನ ಸಮಾಜಮುಖಿ ಯುವಕರನ್ನು, ಹಿರಿಯರನ್ನು ಸೇರಿಸಿ ನಂಡೆ ಪೆಂಲ್ ಅಭಿಯಾನ ಯಾಕೆ, ಹೇಗೆ ಎಂದು ತಿಳಿಹೇಳುತ್ತಿದ್ದಾರೆ. ಅಭಿಯಾನಕ್ಕೆ ಹೆಚ್ಚಿನೆಡೆ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರಕುತ್ತಿದ್ದು. ಈಗಾಗಲೇ 30ರ ಹರೆಯ ಮೀರಿದ ಸುಮಾರು ಒಂದೂವರೆ ಸಾವಿರ ಕುವರಿಯರ ಪಟ್ಟಿಯನ್ನು ಸಂಸ್ಥೆಯು ಕಲೆ ಹಾಕಿದೆ.
‘ನಂಡೆ ಪೆಂಙಲ್’ ಯೋಜನೆಯಲ್ಲಿ ಲಾನುಭವಿ ಯಾರು ಮತ್ತು ಪ್ರಾಯೋಜಕ ಯಾರು ಎಂಬುದು ಸಂಬಂಧಪಟ್ಟವರಿಗಷ್ಟೇ ತಿಳಿಯುತ್ತದೆ. ಇಲ್ಲಿ ಲಾನುಭವಿಯ ಸ್ವಾಭಿಮಾನಕ್ಕೆ ಧಕ್ಕೆಯಾಗುವುದೂ ಇಲ್ಲ. ಸಹಜವಾಗಿ ನಡೆಯುವಂತೆ ‘ನಂಡೆ ಪೆಂಲ್’ ಅಭಿಯಾನದಡಿ ವಿವಾಹ ನೆರವೇರುತ್ತದೆ. ಪ್ರಾಯೋಜಕ ಆಹ್ವಾನಿತರು ಮದುವೆ ಸಮಾರಂಭಕ್ಕೆ ಎಲ್ಲರಂತೆ ಹೋಗಿ ಬರುತ್ತಾರೆ. ಒಂದೊಂದು ಬಡ ಹೆಣ್ಣಿನ ಮದುವೆಯ ಜವಾಬ್ದಾರಿಯನ್ನು ಒಬ್ಬೊಬ್ಬ ವಹಿಸಿ ಕೊಳ್ಳುತ್ತಾನೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನು ಅವರವರ ಸಾಮರ್ಥ್ಯಕ್ಕನುಸಾರವಾಗಿ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಏಕಕಾಲಕ್ಕೆ ಹಲವು ಉದ್ದೇಶಗಳು ಪೂರ್ತಿಯಾಗುತ್ತವೆ. ಬಡ ಹೆಣ್ಣು ಮಕ್ಕಳಿಗೆ ಬಾಳು ಸಿಗುತ್ತದೆ. ವರದಕ್ಷಿಣೆ ಸಮಸ್ಯೆ ತೊಡೆದು ಹಾಕಲು ಸಹಕಾರಿಯಾಗುತ್ತದೆ. ಹೆಣ್ಣು ಹೆತ್ತವರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಮದುವೆಯೂ ನೆರವೇರುತ್ತದೆ. ಪ್ರಾಯೋಜಕನಿಗೆ ಆತ್ಮತೃಪ್ತಿಯೂ ಸಿಗುತ್ತದೆ.
ಅಭಿಯಾನದ ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9945613699, 8951517480, 9972283365 ಅನ್ನು ಸಂಪರ್ಕಿಸಬಹುದು.
ನಂಡೆ ಪೆಂಙಲ್ ಅಭಿಯಾನಕ್ಕೆ ಬಹಳಷ್ಟು ಉತ್ತಮ ಸ್ಪಂದನೆ ವ್ಯಕ್ತ ವಾಗುತ್ತಿದೆ. ಯೋಜನೆಯ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿಬರುತ್ತಿದೆ. ಅನೇಕ ದಾನಿಗಳು ಪ್ರಾಯೋಜಕರಾಗಿ ಸಹಕರಿಸುತ್ತಿದ್ದಾರೆ. ದ.ಕ. ಜಿಲ್ಲೆಯ ಅನೇಕ ಪ್ರಮುಖ ಸಂಘಸಂಸ್ಥೆಗಳು ಸಹಭಾಗಿಗಳಾಗಿದ್ದಾರೆ. ಇದೇ ಉದ್ದೇಶಕ್ಕಾಗಿ ರಚಿಸಿದ ಸ್ವಾಗತ ಸಮಿತಿಯ ಸದಸ್ಯರು ಉತ್ಸಾಹದಿಂದ ದುಡಿಯುತ್ತಿದ್ದಾರೆ. ಯೋಜನೆಯ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಸಹಕರಿಸಲು ಇಚ್ಛಿಸುವವರು ನಮ್ಮನ್ನು ಸಂಪರ್ಕಿಸ ಬಹುದು.
ನೌಷಾದ್ ಹಾಜಿ ಸೂರಲ್ಪಾಡಿ
ಅಧ್ಯಕ್ಷರು, ನಂಡೆ ಪೆಂಙಲ್ಸ್ವಾಗತ ಸಮಿತಿ
‘ನಂಡೆ ಪೆಂಙಲ್ ' ಯೋಜನೆಯಲ್ಲಿ ಸಹಕರಿಸುವ ದಾನಿಗಳನ್ನು ಲಾನುಭವಿಗಳ ಮನೆಗೆ ಭೇಟಿ ನೀಡಿಸಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಹಾಗೂ ದಾನಿಗಳ ಕೈಯಿಂದಲೇ ಸಹಾಯಧನವನ್ನು ಹಸ್ತಾಂತರಿ ಸಲಾಗುವುದು. ಒಂದು ವೇಳೆ ದಾನಿಗಳಿಗೆ ಬರಲು ಅಸಾಧ್ಯವಾದಲ್ಲಿ ಅವರ ನೀಡುವ ಸಹಾಯವನ್ನು ಅರ್ಹ ಲಾನುಭವಿಗಳಿಗೆ ತಲುಪಿಸಲಾಗುವುದು. ದಾನಿಗಳು ತಮ್ಮ ಸಹಾಯಧನ ವನ್ನು ನಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿ ಸಹಕರಿಸಬಹುದು.
*ಅಬ್ದುಲ್ ರವೂಫ್ ಪುತ್ತಿಗೆ
ಕೋಶಾಧಿಕಾರಿ, ನಂಡೆ ಪೆಂಙಲ್ ಸ್ವಾಗತ ಸಮಿತಿ
- ‘ನಂಡೆ ಪೆಂಲ್’ ಸ್ವಾಗತ ಸಮಿತಿ ರಚನೆ
‘ನಂಡೆ ಪೆಂಲ್’ ಅಭಿಯಾನದ ಯಶಸ್ವಿಗಾಗಿ ಸ್ವಾಗತ ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೌಷಾದ್ ಹಾಜಿ ಸೂರಲ್ಪಾಡಿ, ಗೌರವಾಧ್ಯಕ್ಷರಾಗಿ ಝಕರಿಯಾ ಜೋಕಟ್ಟೆ, ಮುಖ್ಯ ಸಲಹೆಗಾರರಾಗಿ ಎಸ್.ಎಂ.ರಶೀದ್ ಹಾಜಿ, ಉಪಾಧ್ಯಕ್ಷರಾಗಿ ಬಿ.ಎಂ.ಮುಮ್ತಾಝ್ ಅಲಿ, ಬಿ.ಎಚ್.ಅಸ್ಗರ್ ಅಲಿ, ಅಶ್ರ್ ಕರ್ನಿರೆ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್, ಕೋಶಾಕಾರಿಯಾಗಿ ಅಬ್ದುಲ್ ರವ್ೂ ಪುತ್ತಿಗೆ, ಕಾರ್ಯದರ್ಶಿಗಳಾಗಿ ನಿಸಾರ್ ಮುಹಮ್ಮದ್, ಮುಹಮ್ಮದ್ ಹಾರಿಸ್, ಸಂಪನ್ಮೂಲ ತಂಡದ ಮುಖ್ಯಸ್ಥರಾಗಿ ಎ.ಕೆ.ನಿಯಾಝ್ ಹಾಗೂ ಇನ್ನಿತರ ಪ್ರಮುಖ ಸಾಮಾಜಿಕ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ಅಭಿಯಾನದ ಯಶಸ್ವಿಗಾಗಿ ಸ್ವಾಗತ ಸಮಿತಿಯು ಕಾರ್ಯನಿರತವಾಗಿದ್ದು, ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಮದುವೆ ನಿಗದಿಯಾದ ಅನೇಕ ಅರ್ಜಿಗಳು ಬರುತ್ತಿದ್ದು, ಅಭಿಯಾನದ ಅಂಗವಾಗಿ ಮೊದಲ ಮದುವೆ ಮಾ.19ರಂದು ಬಂಟ್ವಾಳ ತಾಲೂಕಿನ ಲಾನುಭವಿಯೊಬ್ಬರ ಮನೆಯಲ್ಲಿ ನಡೆಯಲಿದೆ.
ಸಹಭಾಗಿಗಳಾಗಲು ಸಂಘಸಂಸ್ಥೆಗಳಿಗೆ ಮನವಿ
‘ನಂಡೆ ಪೆಂಲ್’ ಅಭಿಯಾನವು ದ.ಕ. ಜಿಲ್ಲಾದ್ಯಂತ ಮಾರ್ಚ್ 2017ರಿಂದ ೆಬ್ರವರಿ 2018ರ ತನಕ ನಡೆಯಲಿದೆ. ಜಿಲ್ಲೆಯ ಅನೇಕ ಪ್ರಮುಖ ಸಮಾಜ ಸೇವಾ ಸಂಸ್ಥೆಗಳು ಮತ್ತು ಮ್ಯಾರೇಜ್ ಕಮಿಟಿಗಳು ಈಗಾಗಲೇ ಈ ಅಭಿಯಾನದ ಸಹಭಾಗಿಗಳಾಗಿ ಸಹಕರಿಸುತ್ತಿವೆ. ಇದರಲ್ಲಿ ಸಹಭಾಗಿಗಳಾಗಿ ಸಹಕರಿಸಲು ಇಚ್ಛಿಸುವ ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಮ್ಯಾರೇಜ್ ಕಮಿಟಿಗಳು, ಸ್ಪೋರ್ಟ್ಸ್ ಕ್ಲಬ್ಗಳು, ಯೂತ್ ಕ್ಲಬ್ಗಳು ಸಂಸ್ಥೆಯನ್ನು ಸಂಪರ್ಕಿಸುವಂತೆ ಅಭಿಯಾನದ ಸಂಚಾಲಕ ಮುಹಮ್ಮದ್ ಯು.ಬಿ. ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.