70 ಲಕ್ಷ ಬಾಕಿ ತೆರಿಗೆ ಪಾವತಿಸಿ: ಗೋವಿಂದಗೆ ತೆರಿಗೆ ಇಲಾಖೆಯ ಸಮನ್ಸ್
ಮುಂಬೈ, ಮಾ.25: ಸುಮಾರು 70 ಲಕ್ಷ ರೂ.ಗಳಷ್ಟು ತೆರಿಗೆ ಪಾವತಿ ಬಾಕಿ ಇರಿಸಿಕೊಂಡಿರುವ ಬಗ್ಗೆ ಸೇವಾ ತೆರಿಗೆ ಇಲಾಖೆಯಿಂದ ಸಮನ್ಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಮತ್ತು ಬಾಲಿವುಡ್ ನಟ ಗೋವಿಂದ ಇಂದು ಜುಹುವಿನಲ್ಲಿರುವ ತೆರಿಗೆ ಇಲಾಖೆಯೆದುರು ಹಾಜರಾದರು.
ಕಳೆದ ಮೂರು ವರ್ಷಗಳಲ್ಲಿ ವಿವಿಧ ಮೂಲಗಳಿಂದ 5 ಕೋಟಿ ಆದಾಯ ಗಳಿಸಿರುವುದಾಗಿ ತಮ್ಮ ಲೆಕ್ಕಪತ್ರದಲ್ಲಿ ಗೋವಿಂದ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸುಮಾರು 70 ಲಕ್ಷ ರೂ.ಗಳಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಈ ಕಾರಣ ಅವರಿಗೆ ಸಮನ್ಸ್ ನೀಡಲಾಗಿದೆ. ಕೆಲ ದಿನಗಳಲ್ಲೇ ತೆರಿಗೆ ಪಾವತಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story