ಓ ಮೆಣಸೇ...
ದೇಶದ ಐಕ್ಯತೆಗೆ ಭಾರತ ಮಾತಾ ಕಿ ಜೈ ಜೊತೆಗೆ, ಭಾರತ ಪಿತಾಕಿ ಹಾಗೂ ಭಾರತ ಭಾಗ್ಯ ವಿಧಾತಾ ಘೋಷಣೆಗಳು ಇರಲಿ
-ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ
ಬರೇ ಘೋಷಣೆಗಳಿಂದ ಏಕತೆಯನ್ನು ನಿರ್ಮಿಸಲು ಹೊರಟಿರುವುದೇ ಇಂದಿನ ದುರಂತ.
ಕಾಂಗ್ರೆಸ್‌ನ ಸಂಘಟನಾ ವ್ಯವಸ್ಥೆ ಬಿಜೆಪಿ-ಆರೆಸ್ಸೆಸ್ ಸಂಘಟನಾ ಶಕ್ತಿಗೆ ಸಮವಲ್ಲ
- ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
ಹೌದು. ಅದು ಉತ್ತರ ಪ್ರದೇಶದಲ್ಲಿ ಸಾಬೀತಾಯಿತು ಕೂಡ.
---------------------
ರಾಜ್ಯ ಸರಕಾರ ಸತ್ತಿದೆಯೋ, ಐಸಿಯುನಲ್ಲಿದೆಯೋ?
-ನಳಿನ್ ಕುಮಾರ್ ಕಟೀಲು, ಸಂಸದ
ಸಾಯಿಸುವುದು ಇತ್ತೀಚೆಗೆ ನೀವು ವೃತ್ತಿ ಮಾಡಿಕೊಂಡಂತಿದೆ.
---------------------
ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರೂ ಹೋಗುವುದಿಲ್ಲ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಹಾಗೆಂದು ಸಂಪೂರ್ಣ ಮುಳುಗಿದ ಹಡಗಿಗೆ ಹಾರುತ್ತಾರೆಯೇ?
---------------------
ಉ.ಪ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನನ್ನ ಸಹೋದರನಿದ್ದಂತೆ
- ಉಮಾಭಾರತಿ, ಕೆಂದ್ರ ಸಚಿವೆ
ಅವಳಿ ಜವಳಿ ಯಾಗಿ ಹುಟ್ಟಿದ್ದಂತೆ ಹೌದೇ?
ಉತ್ತರ ಪ್ರದೇಶ ಉತ್ತಮ ಪ್ರದೇಶ ಆಗಲಿದೆ
- ನರೇಂದ್ರ ಮೋದಿ, ಪ್ರಧಾನಿ
ಇಡೀ ರಾಜ್ಯವೇ ಕಸಾಯಿಖಾನೆಯಾಗುವ ಸೂಚನೆಗಳಿವೆ.
---------------------
ನಾನು ಕಾಂಗ್ರೆಸ್ ಬಿಡಲ್ಲ
-ಎಚ್.ವಿಶ್ವನಾಥ್, ಮಾಜಿ ಸಂಸದ
ಕಾಂಗ್ರೆಸ್‌ಗೆ ಬೆದರಿಕೆಯೇ?
---------------------
ಸಂಜೆ 6 ಗಂಟೆ ಬಳಿಕದ ನಮ್ಮ ಬದುಕು ಸಂಪೂರ್ಣ ವೈಯಕ್ತಿಕ.
- ನವಜೋತ್ ಸಿಂಗ್ ಸಿಧು , ಪಂಜಾಬ್ ಸಚಿವ
ಅದನ್ನು ಖಾಸಗಿ ಕೋಣೆಯಲ್ಲಿ ಗುಟ್ಟಾಗಿ ಮಾಡುವುದನ್ನು ಬಿಟ್ಟು ಟಿವಿ ಕ್ಯಾಮರಾದ ಮುಂದೆ ಮಾಡಿದರೆ ವೈಯಕ್ತಿಕ ಹೇಗಾಗುತ್ತದೆ?
---------------------
ನನ್ನ ಯಾನ ಈಗ ಪ್ರಮುಖ ನಿಲ್ದಾಣಕ್ಕೆ ಬಂದು ನಿಂತಿದೆ - ಎಸ್.ಎಂ. ಕೃಷ್ಣ , ಮಾಜಿ ಮುಖ್ಯಮಂತ್ರಿ.
ಮಾನವನ್ನು ಒತ್ತೆಯಿಟ್ಟ ಯಾನ!
ಎಸ್.ಎಂ.ಕೃಷ್ಣ ಅವರ ಅನುಭವವನ್ನು ಉಪಯೋಗ ಮಾಡಿಕೊಳ್ಳುತ್ತೇವೆ
- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಬಾಡಿದ ಬಾಳೆ ಎಲೆ ಅದು, ಬೇಗ ಬಳಸಿ ಎಸೆಯಿರಿ.
---------------------
ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಇತ್ಯರ್ಥಕ್ಕೆ ಮುಸ್ಲಿಂ ಸಮುದಾಯ ಸಿದ್ಧವಾಗಿದೆ
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಮುಸ್ಲಿಮ್ ಸಮುದಾಯವನ್ನು ನೀವೇ ಪ್ರತಿನಿಧಿಸುತ್ತಿರುವ ಹಾಗಿದೆ.
---------------------
ಸದನದಲ್ಲಿ ಸಂತೆಯಲ್ಲಿ ಮಾತನಾಡಿದಂತೆ ಭಾಷಣ ಮಾಡಬಾರದು
- ಸಿ.ಟಿ.ರವಿ, ಶಾಸಕ
ಸಂತೆಯಲ್ಲಿ ಭಾಷಣ ಮಾಡಿ ತುಂಬಾ ಅನುಭವವಿರುವಂತಿದೆ!
---------------------
ರಾಜ್ಯವನ್ನು ಉತ್ತರ ಕರ್ನಾಟಕ ಆಗಲು ಬಿಡುವುದಿಲ್ಲ್ಲ
-ಡಾ.ಜಿ. ಪರಮೇಶ್ವರ್ ಸಚಿವ
ಉತ್ತರ ಪ್ರದೇಶ ಮಾಡುವ ಉದ್ದೇಶವೇ?
---------------------
ನಾನು ಬಿಜೆಪಿಯ ಶಿಸ್ತಿನ ಕಾರ್ಯಕರ್ತ
- ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
ಎಲ್ಲಿ, ಒಮ್ಮೆ ಚೆಡ್ಡಿ, ಟೋಪಿ ಧರಿಸಿ ಕವಾಯತು ನಡೆಸಿ ನೋಡೋಣ?
---------------------
ದ್ವೇಷ ಭಾವನೆಯು ಖರ್ಜೂರವನ್ನು ಮುಸಲ್ಮಾನ, ತೆಂಗಿನಕಾಯಿಯನ್ನು ಹಿಂದೂವಾಗಿ ಮಾಡಿದೆ
-ಖಮರುಲ್ ಇಸ್ಲಾಂ, ಮಾಜಿ ಸಚಿವ
ತೆಂಗಿನ ಕಾಯಿ ಚೂರು ಮತ್ತು ಖರ್ಜೂರದ ಚೂರು ಜೊತೆ ಸೇರಿದರೆ ಅದರ ರುಚಿಯೇ ಬೇರೆ.
---------------------
ಉ.ಪ.ಚುನಾವಣಾ ಫಲಿತಾಂಶ ಸಂಶಯಾಸ್ಪದವಾಗಿದೆ
-ಮಮತಾ ಬ್ಯಾನರ್ಜಿ ಪ.ಬ.ಮುಖ್ಯಮಂತ್ರಿ
ಉಳಿದ ಪಕ್ಷಗಳು ಸ್ಪರ್ಧಿಸಿದ್ದು ನಿಜವೇ ಎನ್ನುವ ಸಂಶಯ.
---------------------
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ಗೋಹತ್ಯೆ ನಿಷೇಧ ಜಾರಿ
-ಕೆ.ಎಸ್.ಈಶ್ವರಪ್ಪ, ವಿ.ಪ.ವಿ.ಪ. ನಾಯಕ
ಮತ್ತು ಮನುಷ್ಯರ ಹತ್ಯೆಗೆ ಅನುಮತಿ.
---------------------
ರಾಮ ಮಂದಿರ ನಿರ್ಮಾಣದ ಬಗ್ಗೆ ಮುಸ್ಲಿಮರಲ್ಲಿ ಮೊದಲಿದ್ದ ಭಾವನೆ ಈಗ ಬದಲಾಗಿದೆ
-ಇ.ಚಂದ್ರಶೇಖರ್, ತೆಲಂಗಾಣ ಆರೆಸ್ಸೆಸ್ ಮುಖಂಡ
ನ್ಯಾಯ ವ್ಯವಸ್ಥೆಯ ಕುರಿತಂತೆಯೂ ಕೂಡ.
---------------------
ಇದುವರೆಗೂ ನಾನು ನನಗೆ ಸರಿ ಅನಿಸಿದನ್ನು ಮಾತ್ರ ಮಾಡಿದ್ದೇನೆ
- ವಿರಾಟ್ ಕೊಹ್ಲಿ , ಭಾರತ ಕ್ರಿಕೆಟ್ ತಂಡದ ನಾಯಕ
ದೇಶಕ್ಕೆ ಸರಿ ಅನ್ನಿಸಿದ್ದನ್ನು ಯಾವಾಗ ಮಾಡುತ್ತೀರಿ?
ರಕ್ತ ಹರಿಸಿಯಾದರೂ ಕಸಾಯಿ ಖಾನೆ ನಿಲ್ಲಿಸಲು ನಾಡಿನ ಸಂತ ಸಮೂಹ ಬದ್ಧ
- ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಅಂತೂ ಪ್ರಾಣಿಗಳ ಕಸಾಯಿಖಾನೆ ಮುಚ್ಚಿ, ಮನುಷ್ಯರ ಕಸಾಯಿಖಾನೆ ತೆರೆಯಲು ಹೊರಟಿದೆ ಸಂತ ಸಮೂಹ