‘‘ನೀನು ಹೀಗೆ ಮಾಡಿದರೆ ನಿನ್ನನ್ನು ಹುಲಿಗೆ ಕೊಟ್ಟು ಬಿಡುತ್ತೇನೆ’’ ತಾಯಿ ತನ್ನ ಮಗುವನ್ನು ಬೆದರಿಸುತ್ತಿದ್ದಳು. ಮಗು ಮಾತ್ರ ನಗುತ್ತಿತ್ತು. ಮಗುವಿಗೆ ಹುಲಿಯೆಂದರೆ ಏನು ಎಂದು ಗೊತ್ತಿರಲಿಲ್ಲ, ತಾಯಿ ಎಂದರೆ ಏನು ಎನ್ನುವುದು ಗೊತ್ತಿತ್ತು.