ವೈದ್ಯರನ್ನು ಬೆದರಿಸಿ 5ಲಕ್ಷ ರೂ. ಲಂಚ ಪಡೆದ ಇನ್‌ಕಂ ಟ್ಯಾಕ್ಸ್ ಇನ್ ಸ್ಪೆಕ್ಟರ್ ಬಂಧನ
ಮೂವಾಟ್ಟುಪುಝ,ಎ.1: ವೈದ್ಯರನ್ನು ಬೆದರಿಸಿ ಐದು ಲಕ್ಷ ರೂಪಾಯಿ ಲಂಚ ಪಡೆದ ಆರೋಪಿ ಆದಾಯ ತೆರಿಗೆ ಇನ್ ಸ್ಪೆಕ್ಟರ‍್ ದಿನೇಶನ್ ಎಂಬವರನ್ನು ಶುಕ್ರವಾರ ರಾತ್ರಿ10 ಗಂಟೆಗೆ ಸಿಬಿಐ ಎಸ್ಪಿ ಶಿಯಾಸ್‌ರ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.
ಮೂವಾಟ್ಟುಪುಝದ ಸಬಯನ್ಸ್ ಆಸ್ಪತ್ರೆಯ ಮಾಲಕ ಡಾ. ಸಬಯನ್‌ರಿಂದ ದಿನೇಶನ್ ಲಂಚ ಸ್ವೀಕರಿಸಿದ್ದರು. ಆದಾಯತೆರಿಗೆ ಇಲಾಖೆಗೆ ಸಂಬಂಧಿಸಿದ ನೆರವನ್ನು ತನ್ನಿಂದ ಪಡೆದುಕೊಳ್ಳಬಹುದೆಂದು ದಿನೇಶನ್ ವೈದ್ಯರಿಗೆ ಭರವಸೆ ನೀಡಿದ್ದಾರೆ. ಇದಕ್ಕಾಗಿ ವೈದ್ಯರಿಂದ ಅವರು ಹತ್ತು ಲಕ್ಷ ರೂ. ಲಂಚ ಕೇಳಿದ್ದರು. ಹಣ ಕೊಡದಿದ್ದಾಗ ವೈದ್ಯರಿಗೆ ದಿನೇಶನ್ ಬೆದರಿಕೆ ಹಾಕಲು ಆರಂಭಿಸಿದ್ದರು.
ವೈದ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಬಿಐ ದಿನೇಶನ್‌ಗೆ ಐದು ಲಕ್ಷರೂಪಾಯಿಯನ್ನು ಕೊಡಲು ನೀಡಿತ್ತು. ಅದರಂತೆ ನಿನ್ನೆ ಸಂಜೆ ದಿನೇಶನ್‌ರನ್ನು ಕರೆಯಿಸಿಕೊಂಡು ಹಣವನ್ನು ನೀಡಿದ್ದಾರೆ. ಹಣ ಪಡೆದ ಕೂಡಲೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ದಿನೇಶನ್‌ರನ್ನು ಬಂಧಿಸಿದರು. ದಿನೇಶನ್‌ರ ಮನೆಯಲ್ಲಿಯೂ ಸಿಬಿಐ ಮಿಂಚಿನ ದಾಳಿ ನಡೆಸಿ ತಪಾಸಣೆ ನಡೆಸಿದೆ.