ಇರಾನ್‌ನಿಂದ 15 ಭಾರತೀಯ ಬೆಸ್ತರ ಬಂಧಮುಕ್ತಿ
ಹೊಸದಿಲ್ಲಿ,ಎ.3: ಕಳೆದ ವರ್ಷ ಬಹರೈನ್‌ನ ಮೀನುಗಾರಿಕಾ ದೋಣಿಗಳೊಂದಿಗೆ ಬಂಧಿಸಲ್ಪಟ್ಟಿದ್ದ 15 ಮಂದಿ ಭಾರತೀಯ ಬೆಸ್ತರನ್ನು ಇರಾನ್ ಬಿಡುಗಡೆಗೊಳಿಸಿದೆ ಯೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ತಿಳಿಸಿದ್ದಾರೆ.
‘‘ ತಮಿಳುನಾಡಿನ 15 ಮಂದಿ ಮೀನುಗಾರರನ್ನು ಇರಾನ್ ಬಿಡುಗಡೆಗೊಳಿಸಿದೆ ಯೆಂದು ತಿಳಿಸಲು ನನಗೆ ಹರ್ಷವಾಗುತ್ತ್ತಿದೆ. 3 ಬಹರೈನ್ ದೋಣಿಗಳೊಂದಿಗೆ ಅವರನ್ನು ಬಂಧಿಸಲಾಗಿತ್ತು ’’ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಭಾರತೀಯ ಬೆಸ್ತರ ಬಿಡುಗಡೆಗಾಗಿ ಶ್ರಮಿಸಿದ್ದಕ್ಕಾಗಿ ಅವರು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಕೆಲವು ಬಹರೈನ್ ಪ್ರಜೆಗಳಿಗೆ ಸೇರಿದ ಮೀನುಗಾರಿಕಾ ದೋಣಿಗಳಲ್ಲಿಕೆಲಸ ಮಾಡುತ್ತಿದ್ದ ಈ ಬೆಸ್ತರು, ಕಳೆದ ವರ್ಷ ಸೆಪ್ಟೆಂಬರ್ 22ರಂದು ಅನುಮತಿ ಯಿಲ್ಲದೆಯೇ ಇರಾನ್‌ನ ಸಮುದ್ರಪ್ರದೇಶವನ್ನು ಪ್ರವೇಶಿಸಿದಾಗ ಅವರನ್ನು ಇರಾನಿ ನೌಕಾಪಡೆ ವಶಕ್ಕೆ ತೆಗೆದುಕೊಂಡಿತ್ತು. ಆನಂತರ ಅವರೆಲ್ಲರನ್ನೂ ಅವರ ದೋಣಿಗಳೊಳಗೆಯೇ ದಿಗ್ಭಂಧನದಲ್ಲಿರಿಸಿತ್ತೆೆನ್ನಲಾಗಿದೆ.
Next Story