ಇಂದು ಕೇರಳದಲ್ಲಿ ಚಿನ್ನದಂಗಡಿ ಬಂದ್ !
ಕೊಚ್ಚಿ,ಎ.5: ಚಿನ್ನಾಭರಣ ವ್ಯಾಪಾರಿಗಳು ರಾಜ್ಯವ್ಯಾಪಿ ಕರೆನೀಡಿದ ಹರತಾಳ ಇಂದು ಬೆಳಗ್ಗೆಯಿಂದ ಆರಂಭವಾಗುತ್ತಿದೆ. ಚಿನ್ನಾಭರಣಗಳಿಗೆ ಸರಕಾರ ಹಾಕಿದ ಖರೀದಿ ತೆರಿಗೆ ಹಿಂಪಡೆಯಬೇಕೆಂದು ಚಿನ್ನದ ಆಭರಣ ವ್ಯಾಪಾರಿಗಳು ಅಂಗಡಿ ಮುಚ್ಚಿ ಪ್ರತಿಭಟಿಸುತ್ತಿದ್ದಾರೆ.
ಹರತಾಳದ ಪ್ರಯುಕ್ತ ಕೇರಳ ಸೆಕ್ರಟರಿಯೇಟ್ ಮಾರ್ಚ್ ,ಧರಣಿ ನಡೆಸಲಾಗುವುದು ಎಂದು ಕೇರಳ ಜುವೆಲ್ಲರ್ಸ್ ಅಸೋಸಿಯೇಶನ್ ಕಮಿಟಿ ತಿಳಿಸಿದೆ. ಚಿನ್ನಾಭರಣ ನಿರ್ಮಿಸುವವರು, ಹಾಲ್ ಮಾರ್ಕಿಂಗ್ ಸೆಂಟರ್‌ಗಳು, ರಿಫೈನರಿಗಳು, ಡೇ ವರ್ಕಿಂಗ್ ಸೆಂಟರ್‌ಗಳು ಮುಂತಾದ ಸಂಸ್ಥೆಗಳು ಹರತಾಳದಲ್ಲಿ ಪಾಲ್ಗೊಳ್ಳುತ್ತಿದೆ.
Next Story