ಕತ್ತಲು
ಸಂತನ ಆಶ್ರಮದಲ್ಲಿ ಕತ್ತಲೆಯ ಬಗ್ಗೆ ಚರ್ಚಿಸಲಾಗುತ್ತಿತ್ತು. ಕತ್ತಲೆಯೆನ್ನುವುದು ಸೂರ್ಯ ನಿಲ್ಲದ ಸ್ಥಿತಿ ಎಂದು ಒಬ್ಬ ಹೇಳಿದ.
ಇಲ್ಲ, ಬೆಳಕಿಲ್ಲದ ಸ್ಥಿತಿ ಎಂದು ಮಗದೊಬ್ಬ ಹೇಳಿದ.
ಇಲ್ಲ, ಕಣ್ಣಿಲ್ಲದ ಸ್ಥಿತಿಯೇ ಕತ್ತಲೆ ಎಂದು ಮಗದೊಬ್ಬ ಹೇಳಿದ.
ಅದನ್ನು ಬಹುತೇಕರು ಒಪ್ಪಿಕೊಂಡರು.
ಅಷ್ಟರಲ್ಲಿ ಸಂತ ಅಲ್ಲಿಗೆ ಬಂದವನು ಹೇಳಿದ ‘‘ಇಂದು ನಾನು ನಗರದಲ್ಲಿ ದಾರಿ ತಪ್ಪಿದೆ. ಕುರುಡನೊಬ್ಬ ನನಗೆ ಸರಿ ದಾರಿ ತೋರಿಸಿದ...’’
Next Story