ವಿಮರ್ಶೆ
ಲೇಖಕನೊಬ್ಬ ವಿಮರ್ಶಕರಲ್ಲಿ ಬಂದು ಹೇಳಿದ ‘‘ನೀವು ನನ್ನ ಕೃತಿಯನ್ನು ಅಷ್ಟು ಕ್ರೂರವಾಗಿ ವಿಮರ್ಶೆ ಮಾಡಬಾರದಿತ್ತು’’
ವಿಮರ್ಶಕರು ಹೇಳಿದರು ‘‘ಅಯ್ಯೋ ನನ್ನ ವಿಮರ್ಶೆಯೇ ವಾಸಿ. ನನ್ನ ಮಗಳು ಮಾಡಿರುವ ವಿಮರ್ಶೆ ಅದಕ್ಕಿಂತಲೂ ಕೆಟ್ಟದಿದೆ.
‘‘ನಿಮ್ಮ ಮಗಳೂ ವಿಮರ್ಶಕರೇ...ಅವರು ಯಾವ ಕಾಲೇಜಿನಲ್ಲಿ ಸಾಹಿತ್ಯಾಭ್ಯಾಸ ಮಾಡಿದ್ದಾರೆ..’’
ವಿಮರ್ಶಕ ನಗುತ್ತಾ ತನ್ನ ಮಗಳೆಡೆಗೆ ಕೈ ಮಾಡಿ ತೋರಿಸಿದ. ಎರಡು ವರ್ಷದ ಮಗುವಿನ ಕೈಯಲ್ಲಿ ಲೇಖಕನ ಕೃತಿ ಹರಿದು ಚಿಂದಿಯಾಗಿ ಬಿಟ್ಟಿತ್ತು.
Next Story