ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್ನಲ್ಲಿ ಯಶ್ ಗೆ 2 ನೆ ಸ್ಥಾನ
ಬೆಂಗಳೂರು, ಮೇ 5: ಕೊಯಮತ್ತೂರಿನಲ್ಲಿ ನಡೆದ ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್ನಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಶಾಲೆಯ ಯಶ್ ಆರಾಧ್ಯ 2ನೆ ಸ್ಥಾನ ಗಳಿಸಿದ್ದಾರೆ.
ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್ನಲ್ಲಿ ಎಲ್ಬಿಜಿ ಸ್ವಿಫ್ಟ್ ಮೊದಲಬಾರಿಗೆ ಚಲಾಯಿಸಿದ ಯಶ್ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಎ.29 ಮತ್ತು 30ರಂದು ನಡೆದ ಎಂಎಸ್ಎಸ್ ಫಾರ್ಮುಲಾ ಜೂನಿಯರ್ ಸೀರಿಸ್ ಮೊದಲ ಸುತ್ತಿನ 5 ಸ್ಪರ್ಧೆಯಲ್ಲಿ ಅತ್ಯುತ್ತಮ ಆರಂಭ ಕಂಡ ಯಶ್ ಮೊದಲ ರೇಸಿನಲ್ಲಿ ಪೋಲ್ಗೆ ಅರ್ಹತೆ ಪಡೆದರು. ರೇಸ್ 2 ರಿವರ್ಸ್ ಗ್ರಿಡ್ ಆಗಿ, ನಾಲ್ಕನೇ ಸಾಲಿನಲ್ಲಿದ್ದು 2ನೇ ಸ್ಥಾನ ಸಂಪಾದಿಸಿದರು. ಮೂರನೇ ರೇಸಿನಲ್ಲಿ ತಾಂತ್ರಿಕ ದೋಷದಿಂದಾಗಿ 7ನೆಯವರಾದರು. 4 ಮತ್ತು 5 ನೇ ರೇಸಿನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಚಾಂಪಿಯನ್ ಶಿಪ್ನಲ್ಲಿ 71 ಪಾಯಿಂಟ್ ಸಂಪಾದಿಸಿ ಮೊದಲ ರೇಸಿನಲ್ಲಿ 2ನೆ ಸ್ಥಾನ ಪಡೆದರು.
2ನೆ ರೇಸಿನಲ್ಲಿ ಸಹ 5 ಸುತ್ತುಗಳಿದ್ದು, ಮೇ 27 ಮತ್ತು 28ರಂದು ಸ್ಪರ್ಧೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಗೊ ಕಾರ್ಟ್ಗೆ ಹೋಲಿಸಿದಲ್ಲಿ ಕಾರ್ ದೊಡ್ಡದಾಗಿದೆ ಮತ್ತು ಬಲಿಷ್ಠವಾಗಿದೆ. ಈ ಗೆಲುವು ಆತ್ಮ ವಿಶ್ವಾಸ ಹೆಚ್ಚಿಸಿದೆ. ಎಂದು ಯಶ್ ಪ್ರತಿಕ್ರಿಯಿಸಿದ್ದಾರೆ.