ಶಿರಿಬೀಡು ಸಂಜೀವ ಮೆಂಡನ್
ಉಡುಪಿ, ಮೇ 6: ಜನಪ್ರಿಯ ಬಸ್ ಕಂಡಕ್ಟರ್ ಆಗಿದ್ದ ಶಿರಿಬೀಡು ಸಂಜೀವ ಮೆಂಡನ್ ಕಟಪಾಡಿ ಸುಭಾಸ್ನಗರದ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 92 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.
ಸಂಜೀವ ಮೆಂಡನ್ ಉಡುಪಿಯ ಮಂಜುನಾಥ ಮೋಟರ್ಸ್ನಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಇವರು ಆಸ್ಕರ್ ಫೆರ್ನಾಂಡೀಸ್ರ ಮೊದಲ ಮತ್ತು ಎರಡನೇ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
Next Story