ಬ್ಯಾಂಕುಗಳಿಗೆ 6,800 ಕೋಟಿ ರೂ. ಪಂಗನಾಮ ಹಾಕಿದ ಜತಿನ್ ಮೆಹ್ತಾ ಎಲ್ಲಿದ್ದಾರೆ ?
ಹೊಸದಿಲ್ಲಿ,ಮೇ 8: ವಿಜಯ ಮಲ್ಯ ಲಂಡನ್‌ಗೆ ಓಡಿಹೋಗಿದ್ದರೆ ಜತಿನ್ ಮೆಹ್ತಾ ಎಲ್ಲಿದ್ದಾರೆ? ಎಲ್ಲಿ ಹೋಗಿ ಅವಿತು ಕುಳಿತಿದ್ದಾರೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ ಕಳೆದ ಒಂದು ವರ್ಷದಿಂದ ಅವರನ್ನು ಜಾರಿ ನಿರ್ದೇಶನಾಲಯ, ಸಿಬಿಐ ಹುಡುಕುತ್ತಿದೆ ಆದರೂ ಪತ್ತೆಯಾಗಿಲ್ಲ. ಯುಎಇಯಲ್ಲಿ ಜತಿನ್ ಮೆಹ್ತಾ ಇದ್ದಾರೆ ಎನ್ನಲಾಗುತ್ತಿದ್ದರೂ ಹೆಚ್ಚಿನ ವಿವರಗಳನ್ನು ಕೇಳಿ ಯುಎಇ ಸರಕಾರವನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಮೆಹ್ತಾರ ಕುರಿತು ಅಲ್ಲಿಂದ ಈವರೆಗೂ ಉತ್ತರವೇ ಸಿಕ್ಕಿಲ್ಲ.
ಆದರೆ ಜತಿನ್ ಬಗ್ಗೆ ಆರ್ಥಿಕ ಗುಪ್ತಚರ ಇಲಾಖೆ ಮುಖ್ಯ ವಿವರವನ್ನು ಸಂಗ್ರಹಿಸಿದೆ ಎನ್ನಲಾಗುತ್ತಿದೆ. ಮಲ್ಯ ಎಲ್ಲಿದ್ದಾರೆ ಎಂದು ಸಿಬಿಐ ಕಂಡುಹುಡುಕಿತು ಹಾಗೂ ಕ್ರಮಕೈಗೊಂಡಿದೆ. ಆದರೆ , ಬ್ಯಾಂಕ್‌ಗೆ ವಂಚಿಸಿದವರಲ್ಲಿ ಸದ್ಯ ಎರಡನೆ ಸ್ಥಾನದಲ್ಲಿರುವ ಮೆಹ್ತಾ ಎಲ್ಲಿದ್ದಾರೆಂದು ಈವರೆಗೂ ಗೊತ್ತೇ ಇಲ್ಲ.
ಜತಿನ್‌ರ ವಿಂಡ್ಸಂ(ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿ)15 ಬ್ಯಾಂಕ್‌ಗಳಿಗೆ 6,800 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿದೆ. ಇದೇ ವೇಳೆ ಕೆರಿಬಿಯನ್ ದ್ವೀಪ ಸಮೂಹ ಸೈಂಟ್ ಕ್ವೀಟ್ಸ್‌ನ ಪೌರತ್ವವನ್ನು ಜತಿನ್‌ಮೆಹ್ತಾ ಸ್ವೀಕರಿಸಿದ್ದಾರೆಂದು ವರದಿಗಳು ಹರಿದಾಡುತ್ತಿವೆ.
ಸೈಂಟ್ ಕ್ವೀಟ್ಸ್ ಭಾರತದೊಂದಿಗೆ ಅಪರಾಧಿಗಳ ವಿನಿಮಯ ಒಪ್ಪಂದಕ್ಕೆ ಈವರೆಗೆ ಸಹಿಹಾಕಿಲ್ಲ. ಜತಿನ್ ಗುಜರಾತ್‌ನಲ್ಲಿ ಬಹುದೊಡ್ಡ ವಜ್ರಕಂಪೆನಿ ನಡೆಸುತ್ತಿದ್ದರು. ಅವರ ಕಂಪೆನಿ ಚಿನ್ನಾಭರಣ ಮತ್ತು ವಜ್ರಾಭರಣ ರಫ್ತಿನಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿತ್ತು.