ಮ.ಪ್ರ.: ಟ್ರಕ್ ಪಲ್ಟಿಯಾಗಿ 11 ಕಾರ್ಮಿಕರ ಸಾವು
ಜಬಲ್ಪುರ, ಮೇ 11: ಇಲ್ಲಿಯ ಚರ್ಗಾವಾನ್ ಪ್ರದೇಶದಲ್ಲಿ ಗುರುವಾರ ನಸುಕಿನಲ್ಲಿ ಮಿನಿಲಾರಿಯೊಂದು ಪಲ್ಟಿಯಾದ ಪರಿಣಾಮ ಕನಿಷ್ಠ 11 ಕಾರ್ಮಿಕರು ಮೃತಪಟ್ಟಿದ್ದು, ಇತರ ಆರು ಜನರು ಗಾಯಗೊಂಡಿದ್ದಾರೆ.
ನಸುಕಿನ ಒಂದು ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ತೆಂಡು ಎಲೆಗಳನ್ನು ಕೀಳಲೆಂದು 17 ಕಾರ್ಮಿಕರು ಅರಣ್ಯ ಇಲಾಖೆಯ ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ನಿಯಂತ್ರಣ ಕಳೆದುಕೊಂಡಿದ್ದು ಲಾರಿ ಪಲ್ಟಿಯಾಗಲು ಕಾರಣವೆಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದರು. ಗಾಯಾಳುಗಳನ್ನು ಜಬಲ್ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story