ಹಾರರ್-ಥ್ರಿಲ್ಲರ್ ಚಿತ್ರದಲ್ಲಿ ಗೌತಮಿ
ದಕ್ಷಿಣ ಭಾರತದ ಜನಪ್ರಿಯ ನಟಿ ಗೌತಮಿ 14 ವರ್ಷಗಳ ಸುದೀರ್ಘ ಅಂತರದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಹೌದು. ಕೆ. ಸುರೇಂದ್ರನ್ ನಿರ್ದೇಶನದ ಹಾರರ್ ಥ್ರಿಲ್ಲರ್ ಚಿತ್ರ ‘ಇ’ನಲ್ಲಿ ಅವರು ಅಲ್ಜಿಮಿರ್ಸ್ ಕಾಯಿಲೆ ಪೀಡಿತ ಸಂಗೀತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಭಿನ್ನವಾದ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ಹಲವಾರು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ‘ಇ’ ಚಿತ್ರದ ಪಾತ್ರವು ಗೌತಮಿಯ ಚಿತ್ರಜೀವನದಲ್ಲೇ ಹೊಸ ಮೈಲುಗಲ್ಲಾಗಲಿದೆಯೆಂದು ನಿರ್ದೇಶಕ ಕೆ. ಸುರೇಂದ್ರನ್ ಭರವಸೆಯೊಂದಿಗೆ ಹೇಳುತ್ತಾರೆ. ಸುರೇಂದ್ರನ್ ಈ ಮೊದಲು ‘ಒರಾಲ್’, ‘ರೇಸ್’, ‘ವೀರಾಳಿ ಪಟ್ಟ್’ ಎಂಬ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಬಹುಭಾಷಾ ಚಿತ್ರ ನಿರ್ದೇಶಕ ಸಂತೋಷ್ ಶಿವನ್ ನಿರ್ಮಿಸುತ್ತಿರುವ ಈ ಚಿತ್ರದ ಶೂಟಿಂಗ್ ಜೂನ್‌ನಲ್ಲಿ ಆರಂಭಗೊಳ್ಳಲಿದೆ.
2003ರಲ್ಲಿ ತೆರೆಕಂಡ ‘ವರುಮ್ ವರುಮ್ ವನ್ನ್ನು’ ಗೌತಮಿ ಅಭಿನಯದ ಕೊನೆಯ ಮಲಯಾಳಂ ಚಿತ್ರವಾಗಿತು. ಬಾಲಚಂದ್ರ ಮೆನನ್ ಆ ಚಿತ್ರದ ನಿರ್ದೇಶಕರಾಗಿದ್ದರು. ‘ಇ’ ಚಿತ್ರದ ಮೂಲಕ ಗೌತಮಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆಂಬ ಭರವಸೆಯ ಮಾತುಗಳು ಕೇಳಿಬರುತ್ತಿವೆ.