‘‘ಜಗತ್ತಿನ ಎಲ್ಲ ಕೆಲಸಗಳಿಗೆ ನಿವೃತ್ತಿ ಇದೆ. ಆದರೆ ಮನೆಯಲ್ಲಿ ಅಮ್ಮನ ಕೆಲಸಕ್ಕೆ ಮಾತ್ರ ನಿವೃತ್ತಿಯಿಲ್ಲ’’
ಯಾರೋ ಹೇಳಿದರು.
ಅಷ್ಟರಲ್ಲಿ ಅವನು ಉತ್ತರಿಸಿದ ‘‘ಹಾಗೇನು ಇಲ್ಲ. ನನ್ನ ಅಮ್ಮ ನಿನ್ನೆ ನಿವೃತ್ತಳಾದಳು’’
‘‘ಅದು ಹೇಗೆ?’’ ಎಲ್ಲರೂ ಕೇಳಿದರು.
‘‘ನಿನ್ನೆಯಷ್ಟೇ ಆಕೆ ಇಹ ಲೋಕ ತ್ಯಜಿಸಿದಳು’’ ಅವನು ಭಾರವಾದ ಧ್ವನಿಯಿಂದ ಉತ್ತರಿಸಿದ.