ಗೋಹತ್ಯೆ ನಿಷೇಧ ಖಂಡಿಸಿ ವಿನೂತನ ಪ್ರತಿಭಟನೆ
ನಮ್ಮ ಆಹಾರ-ನಮ್ಮ ಹಕ್ಕು
ಬೆಂಗಳೂರು, ಮೇ 28: ಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ಖಂಡಿಸಿ ‘ನಮ್ಮ ಆಹಾರ- ನಮ್ಮ ಹಕ್ಕು’ ಘೋಷಣೆಯೊಂದಿಗೆ ಎಸ್‌ಎಫ್‌ಐ-ಡಿವೈಎಫ್‌ಐ ಜಂಟಿಯಾಗಿ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ.
ಇಲ್ಲಿನ ಪುರಭವನದ ಮುಂಭಾಗದಲ್ಲಿ ಮೇ 29ರಂದು ಸಂಜೆ 5:30ಕ್ಕೆ ನಡೆಯಲಿರುವ ಪ್ರತಿಭಟನೆಯಲ್ಲಿ ಎಡಪಕ್ಷಗಳು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದು, ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೇಂದ್ರ ಸರಕಾರದ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಲಾಗುವುದು.
ಕೇಂದ್ರ ಸರಕಾರ ಮಾಂಸಕ್ಕಾಗಿ ಜಾನುವಾರುಗಳ ಮಾರಾಟ ನಿಷೇಧಿಸಿರುವುದು ರೈತರಿಗೆ ಭಾರೀ ಹೊಡೆತ ಬೀಳಲಿದೆ. ಮಾತ್ರವಲ್ಲ ಬಹು ಸಂಖ್ಯಾತರ ಆಹಾರ ಹಕ್ಕಿನ ಮೇಲೆ ಹೊಡೆತ ಬೀಳಲಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಸ್‌ಎಫ್‌ಐ ಉಪಾಧ್ಯಕ್ಷ ಚಿಕ್ಕರಾಜು ಎಚ್ಚರಿಸಿದ್ದಾರೆ.
Next Story