ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಹೊಸ ಸಾರಥ್ಯ: ದುರ್ಬಲ ಮಾನದಂಡ
ಖೈರುಲ್ ಹಸನ್
ಎರಡೂವರೆ ತಿಂಗಳ ಕಾಲ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹುದ್ದೆಯನ್ನು ಖಾಲಿ ಇಟ್ಟಿರುವ ಮೋದಿ ಸರಕಾರದ ಕ್ರಮಕ್ಕೆ ವಿರೋಧ ಪಕ್ಷಗಳು ಮತ್ತು ಮಾಧ್ಯಮ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಕೊನೆಗೂ ಹುದ್ದೆಯನ್ನು ಭರ್ತಿ ಮಾಡಿದೆ. ಅಷ್ಟೊಂದು ಪರಿಚಿತರಲ್ಲದ ‘ಸಾಮಾಜಿಕ ಹೋರಾ ಟಗಾರ’ ಖೈರುಲ್ ಹಸನ್ ಅವರನ್ನು ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಹಸನ್ ಅವರು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ನಸೀಮ್ ಅಹ್ಮದ್ ಅವರಿಂದ ಅಧಿಕಾರ ಸ್ವೀಕರಿಸಿಕೊಳ್ಳುವರು. ನಸೀಮ್ 2014ರ ಮಾರ್ಚ್ 4ರಿಂದ 2017ರ ಮಾರ್ಚ್ 3ರವರೆಗೆ ಅಧ್ಯಕ್ಷ ಕಾರ್ಯಭಾರ ನಿರ್ವಹಿಸಿದ್ದರು.40 ವರ್ಷ ಇತಿಹಾಸದ ಅಲ್ಪಸಂಖ್ಯಾತ ಆಯೋಗದಲ್ಲಿ ಈ ಇಬ್ಬರು ಮುಖ್ಯಸ್ಥರ ವಿಚಾರದಲ್ಲಿ ತೀರಾ ವೈರುಧ್ಧಗಳು ಎದ್ದುಕಾಣುತ್ತಿವೆ. ಅಲ್ಪಸಂಖ್ಯಾತ ಆಯೋಗ 1978ರಲ್ಲಿ ಆರಂಭವಾದಾಗಿನಿಂದೀಚೆಗೆ ಮುಖ್ಯಸ್ಥ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಗಳನ್ನು, ನಾಗರಿಕ ಸೇವಾ ಅಧಿಕಾರಿಗಳನ್ನು, ಶಿಕ್ಷಣ ತಜ್ಞರನ್ನು ಅಥವಾ ಖ್ಯಾತ ರಾಜಕಾರಣಿಗಳನ್ನು ನೇಮಕ ಮಾಡಲಾಗುತ್ತಿತ್ತು.
ಆದರೆ ಈ ಬಾರಿ ಮಾತ್ರ ಭಿನ್ನತೆ ಎದ್ದುಕಾಣುತ್ತದೆ. ‘‘ಇದುವರೆಗಿನ ಸಂಪ್ರದಾಯವೆಂದರೆ, ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಆಡಳಿತಗಾರರು ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ಇರುತ್ತಿ ದ್ದರು. ಆದರೆ ಮೊತ್ತಮೊದಲ ಬಾರಿಗೆ ಮೂಲ ವಾಸ್ತವದ ಅರಿವು ಇರುವ ಸಾಮಾಜಿಕ ಹೋರಾಟಗಾರರು ಅಧ್ಯಕ್ಷ ಹಾಗೂ ಸದಸ್ಯರಾಗಿದ್ದಾರೆ’’ ಎಂದು ಬುಧವಾರ ಅಜ್ಞಾತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿತ್ತು.
ಲಕ್ನೋ ಮೂಲದವರು ಎನ್ನಲಾದ ಹಸನ್, ಗುರುವಾರ ದಿಲ್ಲಿ ತಲುಪಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಭೇಟಿ ಮಾಡಿದ್ದಾರೆ. ನಖ್ವಿ, ಹಸನ್ ಅವರನ್ನು ಆಲಂಗಿಸಿಕೊಂಡು, ‘ತನ್ನ ತಮ್ಮ’ ಎಂದು ಟ್ವಿಟರ್ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಈ ಅಭಿ ನಂದನಾ ಟ್ವೀಟ್ ನೋಡಿದರೆ, ಹಸನ್ ಅವರು ಬಿಜೆಪಿಯ ಯುವ ಘಟಕಕ್ಕೆ ನಿಕಟವಾಗಿದ್ದವರು ಎನ್ನುವುದು ಸ್ಪಷ್ಟವಾಗುತ್ತದೆ.
ಎನ್ಸಿಎಂ ಮಾಜಿ ಅಧ್ಯಕ್ಷರು
1978- 1981: ಎಂ.ಆರ್.ಮಸಾನಿ (24.2.1978- 31.5.1978) ಮತ್ತು ನ್ಯಾ.ಎಂ.ಆರ್.ಎ.ಅನ್ಸಾರಿ (28.7.1978- 23.2.19810.
1981-1984: ನ್ಯಾಯಮೂರ್ತಿ ಎಂ.ಎಚ್.ಬೇಗ್
1984-1987: ನ್ಯಾಯಮೂರ್ತಿ ಎಂ.ಎಚ್.ಬೇಗ್
1987-1990: ನ್ಯಾ.ಎಂ.ಎಚ್.ಬೇಗ್ (31.3.88ರವರೆಗೆ) ಹಾಗೂ ಎಸ್.ಎಂ.ಎಚ್.ಬುರ್ನೆ (1.4.88ರ ಬಳಿಕ).
1990-1993: ಎಸ್.ಎಂ.ಎಚ್.ಬುರ್ನೆ
1993-1996: ನ್ಯಾ. ಮುಹಮ್ಮ್ಮದ್ ಸರ್ದಾರ್ ಅಲಿ ಖಾನ್
1996-1999: ಪ್ರೊಫೆಸರ್ ಡಾ.ತಾಹಿರ್ ಮುಹಮ್ಮದ್
21ನೆ ಶತಮಾನದ ಹೊಸ ಅಧ್ಯಕ್ಷರು
21ನೆ ಶತಮಾನದಲ್ಲಿ ಎನ್ಸಿಎಂಗೆ ಅರ್ಧ ಡಜನ್ನಷ್ಟು ಅಧ್ಯಕ್ಷರು ನೇಮಕ ಗೊಂಡಿದ್ದಾರೆ. ಬಹುತೇಕ ಎಲ್ಲರೂ ಉತ್ತಮ ಹಿನ್ನೆಲೆ ಇರುವವರು. ಕೆಲವರು ಐಎಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳೂ ಇವರಲ್ಲಿ ಸೇರಿದ್ದಾರೆ. ಎನ್ಸಿಎಂ ಸೇರುವ ಮುನ್ನವೇ ಅವರು ಅತ್ಯಂತ ಜನಪ್ರಿಯ ಅಧಿಕಾರಿಗಳಾಗಿದ್ದವರು.
ಅವರಲ್ಲಿ ಪ್ರಮುಖರೆಂದರೆ, ಮುಹಮ್ಮದ್ ಹಾಮಿದ್ ಅನ್ಸಾರಿ (ಭಾರತೀಯ ವಿದೇಶಾಂಗ ಸೇವೆ) ಅವರು ಯುಎಇ, ಇರಾನ್ ಹಾಗೂ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯಭಾರ ನಿರ್ವಹಿಸಿದವರು. ಎನ್ಸಿಎಂ ಸೇರುವ ಮುನ್ನ ಅವರು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು. ಆ ಹುದ್ದೆ ತ್ಯಜಿಸಿದ ಬಳಿಕ ಅವರು ಭಾರತದ ಉಪರಾಷ್ಟ್ರಪತಿಗಳಾಗಿ 2007ರಿಂದೀಚೆಗೆ ಸೇವೆ ಸಲ್ಲಿಸುತ್ತಿದ್ದಾರೆ.
2000-2003: ನ್ಯಾಯಮೂರ್ತಿ ಮುಹಮ್ಮದ್ ಶಮೀಂ (ದಿಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ) 2003-2006: ಸರ್ದಾರ್ ತಾರಲೋಚನ ಸಿಂಗ್ (ಸಂಸದರು)
2006-2009: ಮುಹಮ್ಮ್ಮದ್ ಹಾಮಿದ್ ಅನ್ಸಾರಿ (ನಿವೃತ್ತ ಐಎಫ್ಎಸ್ ಅಧಿಕಾರಿ, ಉಪಕುಲಪತಿ ಹಾಗೂ ಹಾಲಿ ಉಪರಾಷ್ಟ್ರಪತಿ). ಮುಹಮ್ಮದ್ ಶಫಿ ಖುರೇಷಿ (3.9.2007- 2.9.2010) ಖ್ಯಾತ ರಾಜಕಾರಣಿ ಹಾಗೂ ಜಮ್ಮು ಕಾಶ್ಮೀರ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ.
2011-2014:ವಜಹತ್ ಹಬೀಬುಲ್ಲಾ (ನಿವೃತ್ತ ಐಎಎಸ್ ಅಧಿಕಾರಿ, ಭಾರತದ ಮೊತ್ತಮೊದಲ ಮಾಹಿತಿ ಆಯುಕ್ತ)
2014-2017: ನಸೀಮ್ ಅಹ್ಮದ್ (ನಿವೃತ್ತ ಐಎಎಸ್ ಅಧಿಕಾರಿ, ಅಲಿಗಡ ಮುಸ್ಲಿಂ ವಿವಿ ವಿಶ್ರಾಂತ ಕುಲಪತಿ).
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ 1978ರಲ್ಲಿ ಸ್ಥಾಪನೆಯಾಗಿರು ವುದು ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಾಗೂ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ. ಆರಂಭದಲ್ಲಿ ಇದು ಶಾಸನೇತರ ಸಂಸ್ಥೆಯಾಗಿ ರಚನೆಯಾದರೂ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ- 1992ರ ಬಳಿಕ ಇದಕ್ಕೆ ಶಾಸನಾತ್ಮಕ ಸ್ಥಾನಮಾನ ಬಂತು.
ಹೊಸ ಎನ್ಸಿಎಂ ತಂಡ
ಎನ್ಸಿಎಂ ಅಧ್ಯಕ್ಷರಾಗಿ ಹಸನ್ ಅವರನ್ನು ನೇಮಿಸುವ ಜತೆಗೆ ನಾಲ್ವರು ಸದಸ್ಯರನ್ನು ಕೂಡಾ ಸರಕಾರ ನೇಮಕ ಮಾಡಿದೆ. ಅವರೆಂದರೆ ಕೇರಳದ ಬಿಜೆಪಿ ಮುಖಂಡ ಜಾರ್ಜ್ ಕುರಿಯನ್, ಮಹಾರಾಷ್ಟ್ರದ ಮಾಜಿ ಸಚಿವ ಸುಲೇಖಾ ಕುಂಬಾರ್, ಗುಜರಾತ್ನ ಜೈನ ಪ್ರತಿನಿಧಿಯಾಗಿ ಸುನೀಲ್ ಸಿಂಘ್ವಿ ಹಾಗೂ ಉದ್ವಾಡ ಅಥೋರ್ನನ್ ಅಂಜುಮನ್ನ ಮುಖ್ಯ ಧಾರ್ಮಿಕ ಮುಖಂಡ ವಡ ದಸ್ತೂರ್ಜಿ ಖುರ್ಷಿದ್.
ಹೊಸ ತಂಡದ ಬಗ್ಗೆ ಎದುರಾಗಬಹುದಾದ ಪ್ರಶ್ನೆಗಳನ್ನು ನಿರೀಕ್ಷಿಸಿರುವ ಸಚಿವ ನಖ್ವ್ವಿ, ‘‘ಇವರು ತೀರಾ ಸಮರ್ಥ ವ್ಯಕ್ತಿಗಳು. ಅಲ್ಪಸಂಖ್ಯಾತರಿಗೆ ಸಂಬಂಧಿ ಸಿದ ಸಮಸ್ಯೆಗಳಿಗೆ ಇವರು ನ್ಯಾಯ ದೊರಕಿಸುತ್ತಾರೆ ಎಂಬ ವಿಶ್ವಾಸವಿದೆ’’ ಎಂದು ಬಣ್ಣಿಸಿದ್ದಾರೆ.
ನಸೀಮ್, ವಜಾಹತ್ ಅಥವಾ ಹಾಮಿದ್ ಅವರಂಥ ಘನ ವ್ಯಕ್ತಿತ್ವದ ವರನ್ನು ಈ ಹುದ್ದೆಗೆ ನೇಮಕ ಮಾಡದಿರುವ ಸರಕಾರದ ಉದ್ದೇಶದ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳು ಮೂಡುತ್ತವೆ. ಆದರೂ ಹನಸ್ ಹಾಗೂ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಆಶಿಸೋಣ.
ಕೃಪೆ:IndiaTomorrow.net.