ಓ ಮೆಣಸೇ…!
ಪ್ರಧಾನಿ ಸೇರಿ ಬಿಜೆಪಿಯವರದ್ದು ಬರೀ ಬಣ್ಣದ ಮಾತುಗಳು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕೇಸರಿ ಬಣ್ಣದ ಮಾತುಗಳು ಎಂದರೆ ಇನ್ನಷ್ಟು ಅರ್ಥಪೂರ್ಣ.
---------------------
ಪಕ್ಷವು (ಬಿಜೆಪಿ) ತಾಯಿ ಇದ್ದಂತೆ - ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಆರೆಸ್ಸೆಸ್ ಮನೆಯಲ್ಲಿ ಜೀತಕ್ಕಿರುವ ತಾಯಿಗೆಂದು ಬಿಡುಗಡೆ?
---------------------
ಉಸಿರು ಇರುವವರೆಗೂ ನಾನು ಬಿಜೆಪಿಯಲ್ಲಿರುವೆ - ಜನಾರ್ದನ ರೆಡ್ಡಿ, ಮಾಜಿ ಸಚಿವ
ಹಾಗಾದರೆ ರಾಜ್ಯದಲ್ಲಿ ಬಿಜೆಪಿಗೆ ಉಸಿರಾಟ ಇನ್ನೂ ಕಷ್ಟವಾಗಬಹುದು.
---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮನ್ಯುಷರಂತೆ ನಡೆದುಕೊಳ್ಳುತ್ತಿಲ್ಲ - ಎಚ್.ವಿಶ್ವನಾಥ್, ಮಾಜಿ ಸಂಸದ
ದೇವರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳುವ ಪ್ರಯತ್ನವೇ?
---------------------
ಕಾಂಗ್ರೆಸ್‌ಗೆ ಹೈಕಮಾಂಡೇ ಇಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ನಿಮ್ಮನ್ನು ನಿಯಂತ್ರಿಸಲು ಕರಂದ್ಲಾಜೆಯವರು ಇದ್ದಂತೆ?
---------------------
ಕೇರಳದ ಯುವತಿ ಸನ್ಯಾಸಿಯ ಜನನಾಂಗ ಕತ್ತರಿಸಿದ್ದು ಸರಿಯಲ್ಲ - ಶಶಿ ತರೂರು, ಕಾಂಗ್ರೆಸ್ ನಾಯಕ
ಕುಂಬಳ ಕಾಯಿ ಕಳ್ಳ ಎಂದರೆ ತಾವು ಮುಟ್ಟಿ ನೋಡಿಕೊಂಡದ್ದು ಏನನ್ನು?
---------------------
ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಲಾಗುವುದು - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಕಾಲು ಕೆರೆದು ಜಗಳಕ್ಕೆ ಬರುವ ಚೀನಕ್ಕೆ ಮೌನವೇ ಉತ್ತರವೇ?
---------------------
ಗೋವು ಕಟುಕರ ಕೈಸೇರದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು - ರಾಘವೇಶ್ವರ ಸ್ವಾಮೀಜಿ,
ರಾಮಚಂದ್ರಾಪುರ ಮಠ ಹೆಣ್ಣು ಮಕ್ಕಳೂ ಕಟುಕರ ಕೈ ಸೇರದಂತೆ ಎಚ್ಚರಿಕೆ ಬೇಡವೇ?
---------------------
ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ರಜನಿಕಾಂತ್ ಯೋಗ್ಯರಲ್ಲ - ಸುಬ್ರಮಣಿಯನ್ ಸ್ವಾಮಿ,
ಬಿಜೆಪಿ ನಾಯಕ ಡ್ಯೂಪ್‌ನ್ನು ಬಳಸುವುದಕ್ಕೆ ಆದೇಶ ನೀಡಿದ್ದಾರಂತೆ.
---------------------
ಪ್ರತಿಯೊಬ್ಬ ಒಳ್ಳೆಯ ವ್ಯಕ್ತಿಯೂ ರಾಜಕೀಯಕ್ಕೆ ಬರಬೇಕು - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಒಳ್ಳೆಯ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕಾದರೆ, ದುಷ್ಟ ವ್ಯಕ್ತಿಗಳನ್ನು ಮೊದಲು ರಾಜಕೀಯದಿಂದ ದೂರವಿರಿಸಬೇಕು.
---------------------
ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲಿಯೂ ಊನಗಳಿವೆ -ಬಾಬಾ ರಾಮ್‌ದೇವ್, ಯೋಗ ಗುರು
ತಮ್ಮ ಔಷಧಿಗಳ ವಿಷಯದಲ್ಲಿ ನೂರಕ್ಕೆ ನೂರು ಸತ್ಯ.
---------------------
ಭಾರತ ಭಯೋತ್ಪಾದನೆಗೆ ಗುರಿಯಾಗಿರುವ ದೇಶವಾಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಭಯೋತ್ಪಾದನೆಯನ್ನು ಉತ್ಪಾದಿಸುವ ದೇಶಗಳ ಸ್ನೇಹವನ್ನು ಮುರಿದು ಈ ಮಾತು ಹೇಳಬಾರದೇ?
---------------------
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಂದರೆ ಗೆದ್ದ ಬಳಿಕ ಟಿಕೆಟ್ ಕೊಡುವ ಉದ್ದೇಶವೇ?
---------------------
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ - ಎಸ್.ಆರ್.ಪಾಟೀಲ್, ಮಾಜಿ ಸಚಿವ
ಮತ್ತಾವ ಸ್ಥಾನಕ್ಕೆ ಮಾಡಿದ್ದೀರಿ ಎನ್ನುವುದನ್ನಾದರೂ ಹೇಳಿ.
---------------------
ಜಾತಿ ಎಂಬುದು ಸಮಾಜದ ಸೃಷ್ಟಿಯೇ ಹೊರತು ದೇವರು ಸೃಷ್ಟಿಸಿದ್ದಲ್ಲ - ಕೆ.ಗೋಪಾಲಭಂಡಾರಿ, ಮಾಜಿ ಸಚಿವ
ಮತ್ತೇಕೆ ಅದನ್ನು ನಿಮ್ಮ ಹೆಸರಿನ ಜೊತೆಗೆ ನೇತಾಡಿಸಿಕೊಂಡಿದ್ದೀರಿ?
---------------------
ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿ - ನಳಿನ್‌ಕುಮಾರ್ ಕಟೀಲು, ಸಂಸದ
ಈಗಾಗಲೇ ಆ ಬಿಸಿ ಎಲ್ಲರ ಮನೆಗಳಿಗೂ ಮುಟ್ಟಿದೆ.
---------------------
ಬಿಜೆಪಿ ಅಂದರೆ ವಿಕಾಸ, ಕಾಂಗ್ರೆಸ್ ಎಂದರೆ ವಿನಾಶ - ಅನಂತ್‌ಕುಮಾರ್, ಕೇಂದ್ರ ಸಚಿವ
ಬಿಜೆಪಿ ವಿಕಾಸ ಆದದ್ದು ನಿಜ. ಜನರು ವಿನಾಶವಾದದ್ದೂ ಅಷ್ಟೇ ಸತ್ಯ.
---------------------
ಮೇಲ್ವರ್ಗದವರು ದಲಿತರ ಮನೆಯ ಹೆಣ್ಣನ್ನು ತಂದು ನೆಂಟಸ್ಥಿಕೆ ಬೆಳೆಸಲಿ - ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ
ಅದಕ್ಕೇ ಶೋಭಾ ಕರಂದ್ಲಾಜೆಯವರು ಯಡಿಯೂರಪ್ಪರನ್ನು ಕಾವಲು ಕಾಯುತ್ತಿರುವುದು.
---------------------
ಗೋರಕ್ಷಕ ಗುಂಪುಗಳಿಗೂ ಬಿಜೆಪಿಗೂ ತಳಕು ಹಾಕುವುದು ಸರಿಯಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಆ ಗುಂಪುಗಳನ್ನು ಗೂಂಡಾಕಾಯ್ದೆಯ ಜೊತೆಗೆ ನೀವೇ ತಳಕು ಹಾಕಬಹುದಲ್ಲ?
---------------------
ರಜನಿಕಾಂತ್ ಬೇರೆ ಪಕ್ಷಕ್ಕೆ ಸೇರುವ ಬದಲು ಬೇರೆ ಪಕ್ಷಗಳು ರಜನಿಕಾಂತ್ ಜೊತೆ ಸೇರಲಿ - ಶತ್ರುಘ್ನ ಸಿನ್ಹಾ, ಬಿಜೆಪಿ ನಾಯಕ
ಅಂದರೆ ಬಿಜೆಪಿ ರಜನಿಕಾಂತ್‌ನೊಳಗೆ ವಿಲೀನವಾಗಲಿದೆಯೇ?
---------------------
ನಾನಿನ್ನೂ ಕಾಂಗ್ರೆಸ್‌ನಲ್ಲಿದ್ದೇನೆ - ಎಚ್.ವಿಶ್ವನಾಥ್, ಮಾಜಿ ಸಚಿವ
ಆದರೆ ಅದಕ್ಕೇನಾದರೂ ಸಾಕ್ಷಗಳಿವೆಯೇ?
---------------------
ನರೇಂದ್ರ ಮೋದಿ ಸರಕಾರದ 3ವರ್ಷದ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ - ಶೋಭಾ ಕರಂದ್ಲಾಜೆ,
ಸಂಸದೆ ಕಪ್ಪು ಹಾಳೆಯಲ್ಲಿ ಕಪ್ಪು ಚುಕ್ಕೆ ಹುಡುಕುವುದು ಕಷ್ಟ,