ಸ್ಕೂಟರ್‌ಗೆ ರಿಕ್ಷಾ ಢಿಕ್ಕಿ
ಮಂಗಳೂರು, ಮೇ 30: ನಗರದ ಮಿಲಾಗ್ರಿಸ್ ಕ್ರಾಸ್ ರಸ್ತೆಯಲ್ಲಿ ಸ್ಕೂಟರ್‌ಗೆ ವಿರುದ್ಧ ದಿಕ್ಕಿನಿಂದ ಬಂದ ರಿಕ್ಷಾ ಢಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸವಾರ ಶಾಮಲಾಲ್ ಎಂಬವರು ಗಾಯಗೊಂಡಿದ್ದಾರೆ.
ಢಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಮಗುಚಿ ಬಿದ್ದು ಸವಾರ ಶಾಮಲಾಲ್‌ಗೆ ಪ್ರಜ್ಞೆ ತಪ್ಪಿತ್ತು ಎನ್ನಲಾಗಿದೆ. ಬಳಿಕ ರಿಕ್ಷಾ ಚಾಲಕನೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story