ಮಾತೆ
ವೃದ್ಧಾಶ್ರಮದಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಿದ್ದಾಕೆಯ ಬಳಿ ಯಾರೋ ಬಂದು ಹೇಳಿದರು ‘‘ನಿನ್ನ ಮಗನನ್ನು ಪೊಲೀಸರು ಎತ್ತಿಕೊಂಡು ಹೋದರಂತೆ’’
ಆಕೆ ಕಂಗಾಲು ‘‘ಯಾಕಂತೆ...?’’
‘‘ಗೋರಕ್ಷಕ ಪಡೆಯಲ್ಲಿದ್ದನಂತೆ. ಯಾರೋ ಗೋವು ಸಾಗಿಸುತ್ತಿದ್ದಾಗ ಇವನು ಗುಂಪು ಕಟ್ಟಿ ಹಲ್ಲೆ ನಡೆಸಿ ಕೊಂದು ಹಾಕಿದನಂತೆ’’
‘‘ಯಾರೋ ಗೋವು ಸಾಗಿಸಿದರೆ ಇವನಿಗೇನು?’’
‘‘ಗೋವು ನಿನ್ನ ಮಗನ ಮಾತೆಯಂತೆ...’’
‘‘ಇಲ್ಲಿಗೆ ನನ್ನನ್ನು ತಂದು ಬಿಟ್ಟಾಗಲೇ ನನಗೆ ಗೊತ್ತಾಗಿತ್ತು, ಅವನಿಗೆ ನಾನು ಮಾತೆಯಲ್ಲವೆನ್ನುವುದು’’ ತಾಯಿ ನಿಟ್ಟುಸಿರಿಟ್ಟಳು.
Next Story