ರಾಜಕೀಯವಾಗಿ ದಲಿತರ ದುರ್ಬಳಕೆ
ಮಾನ್ಯರೆ,
ಭಾರತದಲ್ಲಿ ದಲಿತರನ್ನು ಅದ್ಯಾಕೆ ಪದೇ ಪದೇ ರಾಜಕೀಯವಾಗಿ ಬಳಕೆ ಮಾಡಲಾಗುತ್ತಿದೆ. ಇದೀಗ ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಶ್ರೇಷ್ಠ ಮಾನವತಾವಾದಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾಲದಲ್ಲಿಯೇ ನಮ್ಮನ್ನು ನಮ್ಮ ಕುಲದವರನ್ನು ದೂರವಿಟ್ಟವರೆಲ್ಲ ಇದೀಗ ನಮ್ಮ ಜೊತೆಗೆ ಕೈಜೋಡಿಸುವ ನಿಟ್ಟಿನಲ್ಲಿ ಯೋಚಿಸುತ್ತಿರುವುದು ಕಂಡುಬರುತ್ತಿದೆ. ಎಲ್ಲಾ ಕಡೆ ನಮ್ಮದು ದಲಿತರ ಪಕ್ಷ ಎಂಬ ಮಾತು ಹೇಳುತ್ತಿದ್ದಾರೆ. ಈ ದೇಶದಲ್ಲಿ ಇದು ಮೊದಲ ಬಾರಿಗೆ ದಲಿತರನ್ನು ಇಷ್ಟು ಮಹತ್ವ ಕೊಡುವುದರ ಜೊತೆಗೆ ಅನೇಕ ರಾಷ್ಟ್ರೀಯ ಪಕ್ಷಗಳು ದಲಿತರನ್ನು ಸೆಳೆಯುತ್ತಿ ರುವುದು. ಜಾತಿ ಮತ್ತು ಧರ್ಮದ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಮನಸ್ಸು ಬಾಬಾಸಾಹೇಬರನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲೇ ಇಲ್ಲ. ಇವತ್ತಿಗೂ ನಮ್ಮನ್ನು ಮನಸಾರೆ ಒಪ್ಪಿಕೊಂಡಿರುವವರು ಬೆರಣಿಕೆಯಷ್ಟು ಜನರು ಮಾತ್ರವೆಂಬುವುದು ವಾಸ್ತವದ ಸಂಗತಿಯಾಗಿದೆ.
ಸಾಕ್ಷೀಕರಿಸಿದ ಹಲವು ವಿಷಯಗಳಲ್ಲಿ ನಾವೆಲ್ಲ ಇನ್ನ್ನೂ ಎಷ್ಟು ಹಿಂದೆಯಿದ್ದೇವೆ ಮತ್ತೊಬ್ಬರ ಯೋಚನೆಗಳ ಮೇಲೆಯೇ ಅವಲಂಬಿತರಾಗಿದ್ದೇವೆ ಎಂಬುವುದು ನಂಬಲೇಬೇಕಾದ ವಾಸ್ತವಾಗಿದೆ. ಇತಿಹಾಸ ಇದಕ್ಕೆ ಸತ್ಯ ಸಾಕ್ಷಿಯಿದೆ. ರಾಜಕೀಯದಲ್ಲಿ ಅವರಿಗಿರುವ ವಿದ್ವತ್ತನ್ನು ಗಮನಿಸಿದರೆ ಇಡೀ ರಾಷ್ಟ್ರವಷ್ಟೇ ಅಲ್ಲಾ ಇಡಿ ಪ್ರಪಂಚವೇ ಬೆರಗಾಗುತ್ತಿತ್ತು. ಇಷ್ಟಕ್ಕೂ ಇಂದು ಪ್ರತೀಹೆಜ್ಜೆಗೂ ದಲಿತರ ಹಕ್ಕುಗಳ ಉಳಿಕೆಯ ಮಾತನಾಡುತ್ತಿದ್ದಾರೆ.
ಡಾ.ಅಂಬೇಡ್ಕರ್ ಅವರು ಯಾವಾಗ ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಪ್ರಾರಂಭಿಸಿದರೋ ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್ ಅಸ್ಪೃಶ್ಯ ಅಥವಾ ದಲಿತ ನಾಯಕರೆಂದು ಗುರುತಿಸಲ್ಪಡುತ್ತಾರೆ. ಇಲ್ಲಿ ಅಂಬೇಡ್ಕರ್ ಆಚರಣೆ ಮತ್ತು ಅವರ ಹೋರಾಟ ಯಾರಿಗೂ ಬೇಡವಾಗಿದೆ ಆದರೆ ಓಟಿನ ಮೆಷಿನ್ ಬಟನ್ ಒತ್ತಲು ಮಾತ್ರ ಅವರ ಅನುಯಾಯಿಗಳು ಬೇಕಾಗಿದ್ದಾರೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.