ಓರ್ವ ನೆಜ ಹಸಿರು ಕಾರ್ಯಕರ್ತ ಕೈಲಾಶ್ ಮೂರ್ತಿ
ಕೈಲಾಶ್ ಮೂರ್ತಿ ಕನಿಷ್ಠ ವೆಚ್ಚದಲ್ಲಿ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ನೈಸರ್ಗಿಕ ಬೇಸಾಯ ಮಾಡುತ್ತಿದ್ದಾರೆ. ಅವರು ಮಳೆ ನೀರು ಹಾಗೂ ತನ್ನ ಜಮೀನಿನಲ್ಲಿ ಧಾರಾಳವಾಗಿ ದೊರಕುವ ಸೂರ್ಯನ ಬೆಳಕನ್ನು ಬಳಸುತ್ತಾರೆ, ಎಲ್ಲಾ ರಾಸಾಯನಿಕ ಸಾಮಗ್ರಿಗಳನ್ನು ಹೊರಗಿಡುತ್ತಾರೆ.
ವರುಣಾ ಹಳ್ಳಿಯ ಕೈಲಾಶ್ ಮೂರ್ತಿಗೆ ಸೂರ್ಯನೇ ಎಲ್ಲಾ ಶಕ್ತಿಗಳ ಉಗ್ರಾಣ ಮತ್ತು ನೀರು ಜೀವನದ ಮೂಲ. ಅವರು ಜಲ ಸಂರಕ್ಷಣೆ, ಮಳೆನೀರು ಕೊಯ್ಲು ಮತ್ತು ಗದ್ದೆಗಳಲ್ಲಿ ಬಳಸುವ ವಿಷಕಾರಿ ರಾಸಾಯನಿಕ ಸಾಮಗ್ರಿಗಳ ಘಟಕಗಳ ವಿರುದ್ಧ ಹೋರಾಡುವುದನ್ನು ತನ್ನ ಜೀವನದ ಅಭಿಯಾನವಾಗಿ ಮಾಡಿ ಕೊಂಡಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದು ಈಗ ಓರ್ವ ರೈತನಾಗಿರುವ ಮೂರ್ತಿ ತನ್ನ ರಾಜ್ಯದಲ್ಲಿ ಸಂಪೂರ್ಣವಾಗಿ ಸೌರಶಕ್ತಿಯಿಂದ ಕಾರ್ಯವೆಸಗುವ ಒಂದು ಅಕ್ಕಿಗಿರಣಿಯನ್ನು ಸ್ಥಾಪಿಸಿದ ಮೊಟ್ಟ ಮೊದಲ ವ್ಯಕ್ತಿ. ಅಷ್ಟೇ ಅಲ್ಲ, ಗಿರಣಿಗೆ ಬಳಸಿ ಉಳಿಯುವ ಮಿಗತೆ ವಿದ್ಯುತ್ತನ್ನು ರಾಜ್ಯದ ವಿದ್ಯುತ್ ಇಲಾಖೆಗೆ ಮಾರಾಟ ಮಾಡಿ ಅವರು ಸ್ವಲ್ಪ ಹಣ ಸಂಪಾದನೆ ಯನ್ನು ಮಾಡುತ್ತಾರೆ. ನಿಜವಾದ ಅರ್ಥದಲ್ಲಿ ಮೂರ್ತಿ ಓರ್ವ ಹಸಿರು ಕಾರ್ಯಕರ್ತ. ಮೈಸೂರಿನಿಂದ ಟಿ.ನರಸೀಪುರಕ್ಕೆ ಹೋಗುವ ಹೆದ್ದಾರಿಯ ಪಕ್ಕದಲ್ಲಿರುವ ತನ್ನ ಒಂದೂ ವರೆ ಎಕರೆ ತೋಟದಲ್ಲಿ ಬೀಳುವ ಎಲ್ಲಾ ಮಳೆ ನೀರನ್ನು ಅವರು ಸಂಗ್ರಹಿಸುತ್ತಾರೆ. ವರ್ಷದ ಯಾವುದೇ ದಿನವಿರಲಿ, ಅವರ ಸಂಪ್‌ನಲ್ಲಿ ಕನಿಷ್ಠ ಒಂದು ಲಕ್ಷ ಲೀಟರ್‌ನಷ್ಟು ನೀರು ಇರುತ್ತದೆ. ಅವರು ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಗಳನ್ನು ಮೈಸೂರಿನಿಂದ 65 ಕಿ.ಮೀ. ದೂರದ ಟಿ.ನರಸೀಪುರ ತಾಲೂಕಿನ ದೊಡ್ಡಿಂದುವಾಡಿ ಹಳ್ಳಿ ಯಲ್ಲಿರುವ ತನ್ನ 22 ಎಕರೆ ಹಣ್ಣಿನ ತೋಟದಲ್ಲಿ ಬಳಸುವುದಿಲ್ಲ. ಹಾಗೆಯೇ ಕೊಳ್ಳೆಗಾಲ ತಾಲೂಕಿನ ಮಾದರಹಳ್ಳಿಯ ಲ್ಲಿರುವ ತನ್ನ ಹನ್ನೊಂದು ಎಕರೆ ಕೃಷಿ ಭೂಮಿಯಲ್ಲಿ ಅವರು ವಾರ್ಷಿಕ ಮೂವತ್ತು ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ. ಇದಕ್ಕಾಗಿ ಅವರು ಪಾರಂಪರಿಕ ಭತ್ತ ಬೇಸಾಯಕ್ಕೆ ಬಳಸುವ ನೀರಿನ ಕೇವಲ ಶೇ.25 ರಷ್ಟು ನೀರನ್ನು ಬಳಸುತ್ತಾರೆ.
ತನ್ನ ವಿದ್ಯಾರ್ಥಿ ದಿನಗಳಲ್ಲಿ ಓರ್ವ ಕ್ರೀಡಾಪಟುವಾಗಿದ್ದ ಮೂರ್ತಿಕೀಡಾಪಟುಗಳ ಕೋಟಾದಲ್ಲಿ ವಿಜಯಾ ಬ್ಯಾಂಕ್‌ನಲ್ಲಿ ನೌಕರಿ ಪಡೆದರು. 34ವರ್ಷಗಳ ಸೇವೆಯ ಬಳಿಕ 2011ರಲ್ಲಿ ಬ್ಯಾಂಕ್ ಸೇವೆ ಯಿಂದ ನಿವೃತ್ತರಾದರು. ಸೇವಾವಧಿಯಲ್ಲಿ ಹಲವು ಪಟ್ಟಣಗಳಲ್ಲಿ, ನಗರಗಳಲ್ಲಿ ದುಡಿದರಾದರೂ ಅವರ ಹೃದಯ ಹಳ್ಳಿಯ ಮಣ್ಣಿನಲ್ಲೇ ನೆಟ್ಟಿತ್ತು. ಅರಣ್ಯ ನಾಶ, ಜೀವ ವೈವಿಧ್ಯತೆಯ ನಾಶ, ಗದ್ದೆಗಳಲ್ಲಿ ಸತತವಾಗಿ ರಾಸಾಯನಿಕಗಳ ಬಳಕೆ ಮತ್ತು ಇದರ ಪರಿಣಾಮವಾಗಿ ಲವಣಾಂಶದ ಹೆಚ್ಚಳ ಮತ್ತು ಭೂ ಸವೆತದಿಂದ ನೊಂದ ಮೂರ್ತಿ ತಾನು ನಿವೃತ್ತನಾದ ದಿನದಂದೇ ಓರ್ವ ಪೂರ್ಣಕಾಲಿಕ ರೈತನಾ ದರು. ಭೂ ಮಾತೆಗೆ ವಿಷಕಾರಿ ರಾಸಾಯನಿಕಗಳಿಂದ ಬಿಡುಗಡೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಕೇವಲ ಮೂರು ತಿಂಗಳ ಹಿಂದಷ್ಟೇ ಅವರ ಸೌರಶಕ್ತಿ ಚಾಲಿತ ಅಕ್ಕಿ ಗಿರಣಿ ಕಾರ್ಯಾಚರಿಸಲಾರಂಭಿಸಿತು. 95 ಸೌರ ಪ್ಯಾನೆಲ್‌ಗಳನ್ನು ಹೊಂದಿರುವ ಅವರ ಸೌರ ವಿದ್ಯುತ್ ಘಟಕ ತಿಂಗಳೊಂದರ 1,705 ಯುನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಸದ್ಯಕ್ಕೆ ಅವರು ಇದ ರಲ್ಲಿ ಶೇ. 25 ವಿದ್ಯುತ್ ಬಳಸಿ ಮಿಗತೆಯನ್ನು ಯುನಿಟ್‌ಒಂದರ ರೂ. 6.61ರಂತೆ ಪವರ್ ಗ್ರಿಡ್‌ಗೆ ಮಾರುತ್ತಾರೆ. ಘಟಕ ಸ್ಥಾಪಿಸಲು ಅವರು 22 ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಗಿರಾಣಿಯು ಒಂದು ಗಂಟೆಗೆ ಒಂದು ಟನ್ ಭತ್ತವನ್ನು ನಿಭಾಯಿಸಬಲ್ಲುದು. ಘಟಕಕ್ಕೆ ಅವರು ಒಂದು ಡ್ರೈಯರನ್ನು ಕೂಡ ಅಳವಡಿಸಿದ್ದಾರೆ.
ನೈಸರ್ಗಿಕ ಬೇಸಾಯದ ಓರ್ವ ತೀವ್ರ ಉತ್ಸಾಹಿಯಾಗಿರುವ ಮೂರ್ತಿ ‘ಜೈವಿಕ ಬೇಸಾಯ’ ಎಂಬ ಪದಗಳನ್ನು ಬಳಸಲು ಬಯಸು ವುದಿಲ್ಲ. ಯಾಕೆಂದರೆ ಅವರ ಪ್ರಕಾರ ಜೈವಿಕ ಬೇಸಾಯದಲ್ಲಿ ಕೂಡ ರಾಸಾಯನಿಕ ಅಂಶಗಳು ನುಸುಳಿಕೊಳ್ಳುತ್ತವೆ. ದೊಡ್ಡಿಂದುವಾಡಿಯ ಅವರ ಫಾರ್ಮ್‌ನಲ್ಲಿ ಸುಮಾರು 60 ರೀತಿಯ (ಹರ್ಬ್ಸ್) ಪೊದೆ ಗಳು ಮತ್ತು 250 ಸಸ್ಯ ತಳಿಗಳಿವೆ. ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳು ಮೊದಲ 3ರಿಂದ 8 ವರ್ಷಗಳ ಅವಧಿಯಲ್ಲಿ ಅಧಿಕ ಇಳುವರಿ ನೀಡುತ್ತವಾ ದರೂ, ಅವುಗಳ ನಿರಂತರ ಬಳಕೆ ಭೂಸ್ನೇಹಿಯಾದ ಬ್ಯಾಕ್ಟೀರಿಯಾ ವನ್ನು ನಾಶ ಪಡಿಸುತ್ತದೆ. ಪರಿಣಾಮವಾಗಿ ಮಣ್ಣು ತನ್ನ ಸತ್ವ ಕಳೆದುಕೊಂಡು ನಿರುಪಯೋಗವಾಗುತ್ತದೆ. ಇದನ್ನು ಅರಿತ ಮೂರ್ತಿ ಕೃತಕ ಗೊಬ್ಬರಗಳನ್ನು ತನ್ನ ಜಮೀನಿನಿಂದ ದೂರವಿಡುವುದಲ್ಲದೆ, ಜಮೀನಿನ ತೇವಾಂಶ ವನ್ನು ಹಿಡಿದಿಟ್ಟುಕೊಳ್ಳಬಲ್ಲ ಒಣ ಎಲೆಗ ಳನ್ನು ಹಾಗೂ ಮರಗಳ ಸೊಪ್ಪನ್ನು ತನ್ನ ಜಮೀನಿನ ಮೇಲ್ಮೈಗೆ ಹರಡುತ್ತಾರೆ. ಇದರ ಪರಿಣಾಮವಾಗಿ ಮಣ್ಣಿನಲ್ಲಿರುವ ಎರೆ ಹುಳಗಳು ಕೀಟಗಳು ಮತ್ತು ಫಂಗಸ್‌ಗಳು ಮಣ್ಣನ್ನು ಇನ್ನಷ್ಟು ಫಲವತ್ತಾಗಿಸುತ್ತವೆ. ಬೆಂಗಳೂರಿನ ಅನೇಕ ಕೃಷಿ ಹಾಗೂ ತೋಟ ಗಾರಿಕಾ ಸಂಸ್ಥೆಗಳ ವಿಜ್ಞಾನಿಗಳ ಒಂದು ತಂಡ 2008ರಲ್ಲಿ ಮೂರ್ತಿಯವರ ಫಾರ್ಮ್‌ಗೆ ಭೇಟಿ ನೀಡಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿತು. ಅವರ ಫಾರ್ಮ್ ಶೂನ್ಯ ವೆಚ್ಚದ ನೈಸರ್ಗಿಕ ಬೇಸಾಯದಲ್ಲಿ ಒಂದು ವಿಶಿಷ್ಟ ಪ್ರಯೋಗವೆಂದು ಅರ್ಥಶಾಸ್ತ್ರಜ್ಞ ಆರ್.ಎಸ್.ದೇಶಪಾಂಡೆ ಶ್ಲಾಘಿಸಿದ್ದಾರೆ.
ಹಲವಾರು ವಿಜ್ಞಾನಿಗಳು ಮತ್ತು ನೈಸರ್ಗಿಕ ಬೇಸಾಯದ ಅಭಿ ಮಾನಿಗಳು ಟಿ. ನರಸೀಪುರ ಮತ್ತು ಕೊಳ್ಳೆಗಾಲದಲ್ಲಿರುವ ಮೂರ್ತಿಯವರ ಫಾರ್ಮ್‌ಗೆ ಭೇಟಿ ನೀಡುತ್ತಲೇ ಇದ್ದಾರೆ. ಅವರ ತೋಟದಲ್ಲಿರುವ ಅಡಿಕೆ, ತೆಂಗು, ಬಾಳೆ, ಚಿಕ್ಕು, ಮಾವು ಇತ್ಯಾದಿ 3,069 ಮರಗಳಿಂದ ಸುಮಾರು 1,085 ಟನ್ ಕಾರ್ಬನ್ ಡೈ ಆಕ್ಸೈಡ್ ಶುದ್ಧೀಕರಿಸಲ್ಪಡುತ್ತದೆ ಎಂದು ಅಂದಾಜಿಸಲಾಗಿದೆ. ಮಳೆಗಾಲ ಹೊರತುಪಡಿಸಿ ವರ್ಷದ ಉದ್ದಕ್ಕೂ ಅವರ ತೋಟದ ಸುತ್ತಮುತ್ತದ ಗದ್ದೆಗಳು ಬರಡು ಭೂಮಿಯಂತೆ ಕಾಣಿಸುತ್ತವಾದರೂ, ಇಡೀ ವರ್ಷ ಅವರ ಫಾರ್ಮ್‌ನಲ್ಲಿ 65 ಅಡಿ ಆಳದಲ್ಲಿ ನೀರು ಸಿಗುತ್ತಲೇ ಇರುತ್ತದೆ. ಮೂರ್ತಿ ಕೀಟಗಳನ್ನು ಕೊಲ್ಲುವುದನ್ನು ಕೂಡ ವಿರೋಧಿಸುತ್ತಾರೆ. ಮಣ್ಣು ಮತ್ತು ಪ್ರಕೃತಿಯ ಇತರ ಶಕ್ತಿಗಳು ತಮ್ಮ ಪಾತ್ರವನ್ನು ಧಾರಾಳವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಅವುಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಬೇಕು ಎನ್ನುವುದು ಮೂರ್ತಿಯವರ ಅಭಿಪ್ರಾಯ. ‘‘ತಮ್ಮ ಲಾಭಕ್ಕಾಗಿ ರೈತರ ಮೇಲೆ ರಾಸಾಯಿನಿಕಗಳನ್ನು, ಕೀಟನಾಶಕಗಳನ್ನು ಹೇರಿ, ಮಣ್ಣಿನ ನೈಸರ್ಗಿಕ ಫಲವತ್ತತೆಯನ್ನು ನಾಶ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮನ್ನು ತಪ್ಪು ಹಾದಿಯಲ್ಲಿ ಒಯ್ಯುತ್ತಿವೆ. ನೀರನ್ನು ಸಸ್ಯಗಳಿಗೆ ಪೌಷ್ಟಿಕವಾಗಿ ಮಾಡುವುದು, ಇದರ ಪರಿಣಾಮವಾಗಿ ಸಸ್ಯಗಳಿಂದ ಮನುಷ್ಯರಿಗೆ ಆಹಾರ ಸಿಗುವುದು- ಎಲ್ಲವೂ ಮೂಲಭೂತವಾಗಿ ಸೂರ್ಯನ ಬೆಳಕಿನಿಂದ ನಡೆಯುವ ಪ್ರಕ್ರಿಯೆ’’
2006ರ ಮೇ ತಿಂಗಳಲ್ಲಿ ಜಕಾರ್ತದಲ್ಲಿ ನಡೆದ ಫುಡ್‌ಆ್ಯಂಡ್ ಅಗ್ರಿಕಲ್ಚರಲ್ ಆರ್ಗನೈಜೇಶನ್‌ನ 28ನೆ ಅಧಿವೇಶನ, 2012ರ ಎಪ್ರಿಲ್‌ನಲ್ಲಿ ಸಿಂಗಾಪುರದ ನ್ಯಾಶನಲ್ ಯುನಿವರ್ಸಿಟಿಯಲ್ಲಿ ‘ನ್ಯಾಚುರಲ್ ಫಾರ್ಮಿಂಗ್ ಆ್ಯಂಡ್ ಇಕಲಾಜಿಕಲ್ ಇಶ್ಯೂಸ್’ ಕುರಿತು ನಡೆದ ಸಮಾವೇಶ- ಇತ್ಯಾದಿ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೂರ್ತಿ ಭಾಷಣ ಮಾಡಿದ್ದಾರೆ; ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ಅಭಿವೃದ್ಧಿ ಪಡಿಸಿದ ಬೇಸಾಯ ಕ್ರಮಗಳ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಮೀಡಿಯಾ ರಿಸರ್ಚ್ ಸೆಂಟರ್ ಹಲವು ಡಾಕ್ಯುಮೆಂಟರಿಗಳನ್ನು ಸಿದ್ಧಪಡಿಸಿದೆ.
ಮೂರ್ತಿಯವರ ಪ್ರಕಾರ ರೈತರು ರಾಸಾಯಿನಿಕ ಬೇಸಾಯ ದಿಂದ ನೈಸರ್ಗಿಕ ಬೇಸಾಯಕ್ಕೆ ಬದ ಲಾವಣೆ ತಂದುಕೊಳ್ಳುವುದು ಇಂದಿನ ತುರ್ತು ಅವಶ್ಯವಾಗಿದೆ. ನೈಸರ್ಗಿಕ ಬೇಸಾಯದಿಂದ ಭೂಮಿಯ ಸಹಜ ಜೀವನ ವೈವಿಧ್ಯ ಮಾನವರಿಗೆ ಉತ್ತಮ ಆರೋಗ್ಯ ಮತ್ತು ದುಬಾರಿಯಲ್ಲದ, ಕಡಿಮೆ ವೆಚ್ಚದ ಕೃಷಿ ಉತ್ಪನ್ನಗಳು ಖಂಡಿತವಾಗಿ ಯೂ ಸಾಧ್ಯ.
ಏಕ ರೀತಿಯ ಬೇಸಾಯ ಮತ್ತು ಮೂರ್ತಿ
►ಒಂದು ಎಕರೆ ಭತ್ತ ಬೆಳೆಯಲು ಸಾಮಾನ್ಯವಾಗಿ ತಗಲುವ ಖರ್ಚು ರೂಪಾಯಿ 5,000. ಆದರೆ ಮೂರ್ತಿ ಒಂದು ಎಕರೆಗೆ ವ್ಯಯಿಸುವುದು ರೂ. 7,000
►ಮಸನೊಬು ಫಕವೋಕಾ (ನೈಸರ್ಗಿಕ ಬೇಸಾಯದ ಪಿತಾಮಹ) ಬರೆದ ‘ದಿ ಒನ್ ಸ್ಟ್ರಾರಿವಲ್ಯೂಶನ್’ ನಿಂದ ಮೂರ್ತಿ ಬಹಳಷ್ಟನ್ನು ಕಲಿತುಕೊಂಡರು. ಮೂರ್ತಿ ‘ನೈಸರ್ಗಿಕ ಬೇಸಾಯ’ವನ್ನು ‘ಡು ನಥಿಂಗ್(ಏನೂ ಮಾಡದೆ ಇರುವ) ಫಾರ್ಮಿಂಗ್’ ಎಂದೂ ಕರೆಯಬಹುದು ಎನ್ನುತ್ತಾರೆ.
►ಕೀಟ ನಾಶಕ ಬಳಸಿ ಕೀಟಗಳನ್ನು ಕೊಲ್ಲಬೇಡಿ. ಕೀಟಗಳು ಪ್ರಕೃತಿಯ ಅವಿಭಾಜ್ಯ ಅಂಗ.
►ಏಕಬೆಳೆ ಬೇಸಾಯ (ಮೊನೊಕಲ್ಚರ್) ಕೀಟಗಳಿಗೆ ಹಾಗೂ ಬೆಳೆರೋಗಗಳಿಗೆ ಕಾರಣವಾಗುತ್ತದೆ ಹಲವು ಬೆಳೆಗಳ ಅಂತರ್ ಬೆಳೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.