ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಂಸುದ್ದೀನ್ ಆಯ್ಕೆ
ಮಂಗಳೂರು, ಜೂ.14: ಮಡಿಕೇರಿ ತಾಲೂಕು 8ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಬಿ.ಎ.ಶಂಸುದ್ದೀನ್ ಮಡಿಕೇರಿ ಆಯ್ಕೆಯಾಗಿದ್ದಾರೆ.
ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಕನ್ನಡ, ಕೊಡವ, ಇಂಗ್ಲಿಷ್, ಅರಬಿಕ್, ಮಲಯಾಳಂ, ಬ್ಯಾರಿ, ತುಳು ಭಾಷೆ ಬಲ್ಲ ಶಂಸುದ್ದೀನ್ ಮಡಿಕೇರಿ 3 ನಾಟಕಗಳು, 4 ರೇಡಿಯೋ ನಾಟಕಗಳು, 20ಕ್ಕೂ ಅಧಿಕ ಬೀದಿ ನಾಟಕಗಳನ್ನು ರಚಿಸಿದ್ದಾರೆ. ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟುವಿನ ಸಹ ಸಂಪಾದಕಾಗಿರುವ ಶಂಸುದ್ದೀನ್ ಮಡಿಕೇರಿ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದರು.
Next Story