ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿ ಮುಹಮ್ಮದ್ ಸಖಾಫಿ ನೇಮಕ
ಪುತ್ತೂರು,ಜೂ.15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿ ಮೊಹಮ್ಮದ್ ಸಖಾಫಿ ಅವರು ನೇಮಕಗೊಂಡಿದ್ದಾರೆ.
ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಸೈಯದ್ ಅಹಮದ್ ಅವರ ನಿರ್ದೇಶನದಂತೆ ಎಐಸಿಸಿ ಅಲ್ಪ ಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಖುರ್ಷಿದ್ ಅಹಮದ್ ಅವರು ನೇಮಿಸಿದ್ದಾರೆ.
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ನೆಕ್ಕರೆಮೂಲೆ ನಿವಾಸಿಯಾದ ಮುಹಮ್ಮದ್ ಸಖಾಫಿ ಅವರು ವಿಶ್ವ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ, ಮುಸ್ಲಿಂ ಆರ್ಗನೈಶೇಷನ್ ಆಫ್ ಇಂಡಿಯಾದ ರಾಜ್ಯ ಸಂಚಾಲಕರಾಗಿ, ಮರ್ಕಝ್ ಹುದಾ ಕುಂಬ್ರ ಬೆಂಗಳೂರು ಘಟಕದ ಅಧ್ಯಕ್ಷರಾಗಿ, ಮಹದೀನ್ ಸಖಾಫತಿ ಸುನ್ನಿಯಾದ ಸಲಹೆಗಾರರಾಗಿ, ಮುಸ್ಲಿಂ ವೆಲ್‌ಫೇರ್ ಅಸೋಸಿಯೇಷನ್‌ನ ಜೊತೆ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Next Story