ಭಾರತದಲ್ಲಿ ಪ್ರಜಾಪ್ರಭುತ್ವ ಎಂದರೆ ಬ್ಯಾಂಕ್‌ಗಳನ್ನು ನಿಯಂತ್ರಿಸುವುದು
ನಮ್ಮ ದೇಶದ ಬಹುಪಾಲು ಹಳ್ಳಿಗಳಲ್ಲಿ ಕುಡಿಯುವ ನೀರು ಲಭ್ಯವಿಲ್ಲ, ಸಾಕ್ಷರತೆಯಿಲ್ಲ, ಆಸ್ಪತ್ರೆಗಳಿಲ್ಲ. ಇಂತಹ ಅಸಹಾಯಕ ಜನರು ಮಾನವ-ಕೃತ ಹವಾಮಾನ ಬದಲಾವಣೆಯನ್ನು ಎದುರಿಸಿ ಬದುಕಲಾರರು. ಇಂಥವರಿಗೆ ನೆರವಾಗಲು ಭಾರತ ಸರಕಾರ ಹಣ ಸೃಷ್ಟಿ ವ್ಯವಸ್ಥೆಯನ್ನು ಬದಲಾಯಿಸಲೇ ಬೇಕು. ಮೇಲ್ವರ್ಗದ ಜನ ಇಂಥವರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು, ಈ ಜನರ ಸೇವಕರಾಗಬೇಕು.
ಪ್ರತಿದಿನ ನಾವು ಪತ್ರಿಕೆಗಳಲ್ಲಿ ಬಿಜೆಪಿ ಮಾಡಿದ ನೋಟು ರದ್ದತಿಯ ಉಪವಾಸ ರಾಜಕೀಯವು ಕೃಷಿ ಕಾರ್ಮಿಕರು, ರೈತರು ಮತ್ತು ಇತರ ಕೃಷಿ ನೌಕರರ ಮೇಲೆ ಮಾಡಿದ ಪರಿಣಾಮಗಳ ಬಗ್ಗೆ ಓದುತ್ತಿದ್ದೇವೆ. ಮಾನವಕೃತ ಹವಾಮಾನ ಬದಲಾವಣೆಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳ ಕುರಿತು ನಾನು ಹಲವಾರು ವರ್ಷಗಳ ಕಾಲ ನಡೆಸಿದ ಅಧ್ಯಯನದ ಅವಧಿಯಲ್ಲಿ ನಾನು ಕಂಡಿದ್ದೇನೆ.
ಅರ್ಥಶಾಸ್ತ್ರಜ್ಞರು ಆರ್ಥಿಕ ಪರಿಣಾಮಗಳ ಬಗ್ಗೆ, ರಾಜಕಾರಣಿಗಳು ರಾಜಕೀಯ ಪರಿಣಾಮಗಳ ಬಗ್ಗೆ ಯೋಚಿಸಿದರೆ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ ಮತ್ತು ಪರಿಸರವಾದಿಗಳು, ಈ ಮೂರು ವರ್ಗದವರೆಲ್ಲರೂ ಸೇರಿ ವ್ಯವಸ್ಥೆಯನ್ನು ಸಮಗ್ರವಾಗಿ (ಹೋಲಿಸ್ಟಿಕಲಿ) ನೋಡಬೇಕೆಂದು ಇವರೆಲ್ಲರನ್ನೂ ಒತ್ತಾಯಿಸುತ್ತಾರೆ. ಆದರೆ ಹೀಗೆ ಮಾಡುವಾಗ ಪರಿಸರವಾದಿಗಳೇ ಬೂರ್ಜ್ವಾ ಅರ್ಥಶಾಸ್ತ್ರಜ್ಞರಿಗಿಂತ ಹೆಚ್ಚು ಬೂರ್ಜ್ವಾ ಆಗಿದ್ದಾರೆ.
ಬೂರ್ಜ್ವಾ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತರಿಗಿಂತ ಹೆಚ್ಚು ಬೂರ್ಜ್ವಾ ಆಗಿದ್ದಾರೆ ಅವರು ಅಕಡಮಿಕ್ ಟೈಪ್‌ಗಳಾಗಿದ್ದಾರೆ. ಇನ್ನು ಪತ್ರಿಕೋದ್ಯಮಿಗಳು, ಪತ್ರಕರ್ತರು ಮತ್ತು ಕತೆ-ಕಾದಂಬರಿ ಲೇಖಕರು ಅತ್ಯಂತ ಕ್ರಾಂತಿಕಾರಿಗಳು, ತೀವ್ರವಾದಿಗಳು (ರ್ಯಾಡಿಕಲ್); ಆದರೆ ಇವರು ಅವಾಸ್ತವವಾದಿಗಳಾಗಿದ್ದಾರೆ. ಹಾಗಾದರೆ ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಬಗ್ಗೆ ಅತ್ಯಂತ ರಚನಾತ್ಮಕವಾಗಿ ಯೋಚಿಸುತ್ತಿರುವವರು ಯಾರು? ಯಾರೆಂದರೆ ಭೂರಹಿತ ಕೃಷಿ ಕಾರ್ಮಿಕರು, ಕೃಷಿಕರು ಮತ್ತು ಇತರ ಕೃಷಿ ನೌಕರರು. ನಮಗೆ ತಿನ್ನಲು ಆಹಾರ ಬೇಕು, ಬೆಳೆಗಳನ್ನು ಬೆಳಸಲು, ಮನೆಗಳನ್ನು ಕಟ್ಟಲು, ಸಸಿಗಳನ್ನು ನೆಡಲು ಅವಕಾಶ ಮಾಡಿ ಕೊಡುವ ಒಂದು ಆರ್ಥಿಕ ವ್ಯವಸ್ಥೆ ಬೇಕು, ಆರೋಗ್ಯ, ಉಚಿತ ಶಿಕ್ಷಣ, ಸ್ವಚ್ಛ ನೀರು ಮತ್ತು ಪೂರ್ಣಕಾಲಿಕ ನೌಕರಿ ಮಾಡಲು ನೌಕರಿಗಳನ್ನು ಸೃಷ್ಟಿಸುವ ಮಾರ್ಗಗಳು ಬೇಕು. ಇವೆಲ್ಲ ಚಟುಚಟಿಕೆಗಳಲ್ಲಿ, ಈ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡಿರುವ ಜನರ ಹಾಗೂ ಪರಿಸರವಾದಿಗಳ, ಕಾರ್ಯಕರ್ತರ ಕೊಂಡಿಗಳು ದುರ್ಬಲವಾಗಿವೆ. ಜನಸಾಮಾನ್ಯರ ಹಾಗೂ ಬೂರ್ಜ್ವಾ ಕಾರ್ಯಕರ್ತರ ನಡುವೆ ಸಂಪರ್ಕವಿಲ್ಲದೇ ಇರುವುದರಿಂದ ಹಲವರ ದೃಷ್ಟಿಯಲ್ಲಿ ಬೂರ್ಜ್ವಾ ಕಾರ್ಯಕರ್ತರು, (ಸಂಸತ್‌ನಲ್ಲಿರುವ ಜನಪ್ರತಿನಿಧಿಗಳಾಗಲು ಇಷ್ಟಪಡದವರು) ಅನುಮಾನಾಸ್ಪದವಾಗಿದ್ದಾರೆ.
ಹಾಗಾಗಿ ಸರಕಾರೇತರ ಸಂಘಟನೆಗಳನ್ನು ಬಿಜೆಪಿ ಬಹುಪಾಲು ನಿಷೇಧಿಸಿಬಿಟ್ಟಿದೆ. ಇವುಗಳು ಸಾಮಾಜಿಕ ಖಾಸಗಿ ಸಂಸ್ಥೆಗಳಾಗಬೇಕಾಗಿ ಬಂದಿದೆ. ಆದ್ದರಿಂದ ಈ ರಾಜಕಾರಣಕ್ಕಾಗಿಯಾದರೂ, ಪರಿಸರವಾದಿಗಳ ಒತ್ತಡಗುಂಪು (ಪ್ರೆಶರ್ ಗ್ರೂಪ್ಸ್) ಕೃಷಿ ಕಾರ್ಮಿಕರು ಹಾಗೂ ಇನ್ನಿತರ ರಾಜಕೀಯ ಅಜೆಂಡಾಗಳ ಜೊತೆ ವಿಲೀನಗೊಳ್ಳಲೇ ಬೇಕಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪರಿಸರ ಕುರಿತಾದ ಸಂವಾದವಾಗಬೇಕು. ಪರಿಸರವಾದಿಗಳು, ಬೂರ್ಜ್ವಾಗಳು ತಮ್ಮದೇ ಶೈಲಿಯಲ್ಲಿ ಟೀಕಿಸುವ ಕಿರಿಕ್‌ನ್ನು ಬಿಟ್ಟು ಜವಾಬ್ದಾರಿ ತೆಗೆದುಕೊಳ್ಳುವುದನ್ನು ಕಲಿಯಬೇಕು. ಇವತ್ತು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಸರಕಾರದ ಅಧೀನದಲ್ಲಿದೆ. ಕೇವಲ ನ್ಯಾಯಾಲಯಗಳ ಮೂಲಕ ಕ್ರಮ ತಗೆದುಕೊಳ್ಳುವುದು ಕೂಡ ನಿರುಪಯೋಗಿಯಾಗಿದೆ. ಸಂಕ್ಷೇಪಿಸಿ ಹೇಳುವುದಾದರೆ ಭಾರತೀಯರು ಮಾನವಕೃತ ಹವಾಮಾನ ಬದಲಾವಣೆಯನ್ನು ಗೌರವದಿಂದ ನಿಭಾಯಿಸಬೇಕಾದಲ್ಲಿ, ಸಂಸತ್ತಿನಲ್ಲಿ ಈಗ ಇರುವವರಿಗಿಂತ ಹೆಚ್ಚು ಉತ್ತಮ ಜನಪ್ರತಿನಿಧಿಗಳು ಮಾಡುವ ಶಾಸನಾತ್ಮಕ ಬದಲಾವಣೆಗಳ ಒಂದು ಕಾರ್ಯಕ್ರಮ ನಮಗೆ ಬೇಕಾಗಿದೆ.
ಇದು ಭೂ ರಹಿತ ಕೃಷಿ ಕಾರ್ಮಿಕರ, ರೈತರ, ಹಾಗೂ ಇತರ ಕೃಷಿ ಕೆಲಸಗಾರರ ಆವಶ್ಯಕತೆಗಳನ್ನು ಪೂರೈಸುವ ಕಾರ್ಯಕ್ರಮವಾಗಿರಬೇಕು. ಇದರಿಂದ ಬೂರ್ಜ್ವಾ ಪರಿಸರವಾದಿಗಳಿಗೆ ನಷ್ಟವಾದರೂ ಪರವಾಗಿಲ್ಲ. ಒಟ್ಟಿನಲ್ಲಿ ನಮಗೆ ಬ್ಯಾಂಕ್‌ಗಳ ಪ್ರಜಾಸತ್ತಾತ್ಮಕ ನಿಯಂತ್ರಣ ಬೇಕು. ಪರಿಸರವಾದಿಗಳಿಗೆ ಇದು ಇಷ್ಟವಾಗುವುದಿಲ್ಲ. ಈಗ ರೈತರ ಹಾಗೂ ಇತರರ ಆವಶ್ಯಕತೆಗಳನ್ನು ರಾಜಕಾರಣಿಗಳು ನಿಭಾಯಿಸುತ್ತಿದ್ದಾರೆ; ಇವರು ಇನ್ನಷ್ಟು ಕೆಲಸಮಾಡಲು ಬಯಸುತ್ತಾರಾದರೂ, ಪರಿಸರವಾದಿಗಳು ಇವರಿಗೆ ದೇಶದ ಮೂಲಭೂತ ವಿಷಯಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಹೊಸ ವಿಚಾರಗಳನ್ನು, ಯಾವುದೇ ಹೊಸ ಸಲಹೆಗಳನ್ನು ಕೊಡುತ್ತಿಲ್ಲ. ಭಾರತೀಯರಲ್ಲಿ ಕನಿಷ್ಠ ಅರ್ಧದಷ್ಟು ಜನರ ದೃಷ್ಟಿಯಲ್ಲಿ ನರೇಂದ್ರ ಮೋದಿಯವರು ಈಗ ಕೂಡ ಪ್ರಧಾನಿಯಾಗಿ ತುಂಬ ಯಶಸ್ವಿ.
ಏಕೆಂದರೆ ಅವರು ತನ್ನನ್ನು ಹಣದ ಓರ್ವ ಸರ್ವಾಧಿಕಾರಿಯಾಗಿ ಜನರ ಮುಂದೆ ಪ್ರಸ್ತುತಪಡಿಸಿಕೊಂಡಿದ್ದಾರೆ. ಆಧುನಿಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ ಇದು ಬಹಳ ಮುಖ್ಯ ವಿಷಯವಾಗಿದೆ. ಬ್ರಿಟನಿನಲ್ಲಿ ಲೇಬರ್ ಪಕ್ಷದ ಆರಂಭಿಕ ಕಾಲದಲ್ಲಿ ಕಾರ್ಮಿಕ ವರ್ಗದ ಸೇವೆಗೈದ ಫೇಬಿಯನ್ನರ ಹಾಗೆ ಭಾರತದಲ್ಲಿ ಪರಿಸರವಾದಿಗಳು ಕೃಷಿ ಕಾರ್ಮಿಕರನ್ನು, ಕೃಷಿಕರನ್ನು ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳಲ್ಲಿರುವ ನಾಯಕರನ್ನು ಬೆಂಬಲಿಸಬೇಕಾಗಿದೆ; ಭಾರತೀಯ ಸಂವಿಧಾನವನ್ನು ಪುನರ್‌ರೂಪಿಸಬೇಕಾಗಿದೆ ಯಾಕೆಂದರೆ ಮೇಲ್ವರ್ಗದವರು ಬಂಡವಾಳಶಾಹಿಗಳು ಜನರ ಅಧಿಕಾರ ಕಿತ್ತುಕೊಳ್ಳುವಂತೆ ಮಾಡಿದರು. ದೀನದಲಿತರನ್ನು ರಕ್ಷಿಸುವ ಯೋಜನೆಗಳಿರುವ ಒಂದು ಸರಿಯಾದ ಜನಪ್ರತಿನಿಧಿಗಳಿರುವಂತೆ ನಾವು ನೋಡಿಕೊಂಡಲ್ಲಿ ಸಂವಿಧಾನವನ್ನು ಮತ್ತೊಮ್ಮೆ ರಕ್ಷಿಸಬಹುದಾಗಿದೆ.
ಪರಿಸರದ ಪುನರ್ ನವೀಕರಣವನ್ನು ಉಳಿಸುವ ಮೂಲಕ ಎಲ್ಲರಿಗೂ ನೌಕರಿ ದೊರಕುವಂತಹ ಯೋಜನೆ ಸರಕಾರದ ಯೋಜನೆಯಾಗಬೇಕು. ಭಾರತದಲ್ಲಿ ಸರಕಾರಗಳು ಬಡವರ ಕೂಗನ್ನು ಕೇಳಲೇಬೇಕು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸರಕಾರಗಳು, ಖಾಸಗಿ ಬ್ಯಾಂಕಿಂಗ್ ಮತ್ತು ಸಮಾಜವಾದಿ ಸರಕಾರ ಜೊತೆ ಜೊತೆಯಾಗಿ ಇರಲಾರವು ಎನ್ನುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿವೆ. ಭಾರತೀಯರಲ್ಲಿ ಪ್ರತಿಯೊಂದು ಅರ್ಥದಲ್ಲೂ ಅವಕಾಶವಂಚಿತರಾಗುವ ಬಹುಸಂಖ್ಯಾತರನ್ನು ಓಲೈಸಲು ನರೇಂದ್ರ ಮೋದಿ ಪ್ರಯತ್ನಿಸಿದರಾದರೂ, ತನ್ನ ಹಣಕಾಸು ಕೊರತೆಯನ್ನು ನೀಗಲು ತಾತ್ಕಾಲಿಕ ಟ್ರೆಜರಿ ಬಿಲ್‌ಗಳ ಆರಂಭದ ದಿನಗಳಿಗೆ ಮರಳಿ ಹೋಗಲು ಅವರು ಅಸಮರ್ಥರಾಗಿದ್ದಾರೆ. ಹಾಗಾಗಿ ಹೊಸ ಠೇವಣಿದಾರರ ಬ್ಯಾಂಕ್ ಖಾತೆಗೆಗಳಿಗೆ ಲಕ್ಷಗಟ್ಟಲೆ ಹಣ ಜಮೆ ಮಾಡುವ ಅವರ ಆಶ್ವಾಸನೆ ಈಡೇರದೆ ಹೋಯಿತು. ಶಿಕ್ಷಣ ಕೌಶಲ್ಯಗಳು ಮತ್ತು ಉದ್ಯೋಗಗಳ ಬಗ್ಗೆ ಅವರು ನೀಡಿದ ಆಶ್ವಾಸನೆಗಳಂತೂ ಹಾಗೆಯೇ ಉಳಿದವು.
ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಭಾರತದ ಇತರ ಎಲ್ಲ ರಾಜ್ಯಗಳು ಕೂಡ ಭವಿಷ್ಯದಲ್ಲಿ ನಡೆಯಲಿರುವ ಭಾರೀ ಉಷ್ಣಾಂಶ ಏರಿಕೆಯ ದಾಳಿಯನ್ನು ಎದುರಿಸಿ ಉಳಿಯಬೇಕಾದಲ್ಲಿ ನಾವು ಪ್ರಭಾವೀ ಮೇಲ್ಜಾತಿಯವರನ್ನು (ಎಲೈಟ್ಸ್) ಅಧಿಕಾರದಿಂದ ಕಿತ್ತೊಗೆಯಬೇಕು.
ಂದ್ರೀಕೃತ ಯೋಜನೆ, ಮತ್ತೆ ಬಳಿಕ ಬಂಡವಾಳ ಶಾಹಿಯನ್ನು ಆಯ್ದುಕೊಂಡವರು. ಇವರ ಆಡಳಿತಕ್ಕೆ ಬದಲಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ವಿಕೇಂದ್ರೀಕೃತ ಶಾಖೆಗಳ ಮೂಲಕ ಸ್ಥಳೀಯ ಸಾರ್ವಜನಿಕ ಹಣಕಾಸನ್ನು ಸೃಷ್ಟಿಸುವ ಒಂದು ಹೊಸ ವ್ಯವಸ್ಥೆಯನ್ನು ನಾವು ಜಾರಿಗೆ ತರಲೇಬೇಕು. ಇದು ನನ್ನ ಕನಿಷ್ಠ ಸಲಹೆ ಸೂಚನೆ. ಬಂಡವಾಳಶಾಹಿಯು ಖಾಸಗಿ ಹಣದಿಂದ ನಡೆಯುತ್ತದೆ. ಸಮಾಜವು ಸಾರ್ವಜನಿಕ ಹಣದಿಂದ ನಡೆಯುತ್ತದೆ. ನಿಮ್ಮ ಬಳಿ ಸಾರ್ವಜನಿಕ ಹಣವಿದ್ದಾಗ ಖಾಸಗಿ ಹಣದ ಆವಶ್ಯಕತೆ ಎಲ್ಲಿದೆ? ಬಹುಸಂಖ್ಯಾತ ಬಡವರನ್ನು ನಿಯಂತ್ರಿಸಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮೇಲ್ಜಾತಿಯ ಎಲೈಟ್‌ಗಳು ಮಾಡಿಕೊಂಡ ಒಂದು ವ್ಯವಸ್ಥೆಯಾದ ಮಿಶ್ರ ಅರ್ಥವ್ಯವಸ್ಥೆ (ಮಿಕ್ಸೆಡ್ ಇಕಾನಮಿ) ಎಂಬುದು ಒಂದು ಸುಳ್ಳು. ಇನ್‌ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್ರಪ್ಟ್ಸಿ ರೂಲ್ಸ್ (2016)ನ ಮೂಲಕ ಭಾರತವನ್ನು ಖಾಸಗಿ ವ್ಯಾಪಾರಕ್ಕೆ ಹೆಚ್ಚು ಆಕರ್ಷಕವಾಗಿ ಮಾಡಬಹುದು ಎಂದು ಎಲೈಟ್ಸ್ ತಿಳಿದಿದ್ದಾರೆ.
ಆದರೆ ಅಂತಹ ವಾಣಿಜ್ಯ-ವ್ಯಾಪಾರ ಉದ್ಯಮಕ್ಕೆ ಮಾನವಕೃತ ಹವಾಮಾನ ಉಂಟುಮಾಡುವ ಇಂಧನದ ಔದ್ಯಮಿಕ ರೂಪಗಳು, ಮೂಲಗಳು ಬೇಕು. ಇದು (ಹವಾಮಾನ ಬದಲಾವಣೆ) ವಿಶ್ವದಲ್ಲಿ ಯುದ್ಧಕ್ಕೆ ಕಾರಣವಾಗಿದೆ. ಮಿಲಿಯಗಟ್ಟಲೆ ಕೃಷಿಕರು, ಕೃಷಿಕಾರ್ಮಿಕರು ತಮ್ಮ ಪಾಡನ್ನು ನೋಡಿಕೊಳ್ಳಬೇಕಾಗಿರುವಾಗ, ಮೊದಲಾಗಿ ಜಾಗತಿಕ ವಾಣಿಜ್ಯದ ಒಂದು ಭಾಗವಾಗಲು ಬಯಸುವ ಮೇಲ್ಜಾತಿ ಎಲೈಟ್‌ಗಳ ಅಗತ್ಯಗಳನ್ನು ಪೂರೈಸಲು ಭಾರತೀಯರಿಗೆ ಇನ್ನು ಮುಂದೆ ಸಾಧ್ಯವಿಲ್ಲ. ಸಮಾಜವಾದವು ಸಾರ್ವಜನಿಕರ ಪರವಾಗಿ ಬ್ಯಾಂಕ್‌ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ದೀನದಲಿತರ ಅಗತ್ಯಗಳನ್ನು ಪೂರೈಸಬಲ್ಲುದು. ಆದ್ದರಿಂದ ನಾನು ಈ ಕೆಳಗಿನ ಸಲಹೆಗಳನ್ನು ನೀಡಬಯಸುತ್ತೇನೆ. ರೂಪಾಯಿಯ ಮುದ್ರಣ ಪ್ರಸರಣವನ್ನು ನಿಯಂತ್ರಿಸಲು ನಾವು ಭಾರತೀಯ ರಿಸರ್ವ್ ಬ್ಯಾಂಕನ್ನು ಪುನರ್ ರಚಿಸಬೇಕು. ಇದನ್ನು ಹೊರತುಪಡಿಸಿ, ಈಗ ಅಸ್ತಿತ್ವದಲ್ಲಿರುವ ಎಲ್ಲ ಬ್ಯಾಂಕ್‌ಗಳನ್ನು, ಬ್ಯಾಂಕೇತರ ಸಂಸ್ಥೆಗಳನ್ನು ಹಾಗೂ ಹಣ ಸೃಷ್ಟಿಸುವ ಏಜೆನ್ಸಿಗಳನ್ನು ರದ್ದುಪಡಿಸಬೇಕು.
ನಮ್ಮ ದೇಶದ ಬಹುಪಾಲು ಹಳ್ಳಿಗಳಲ್ಲಿ ಕುಡಿಯುವ ನೀರು ಲಭ್ಯವಿಲ್ಲ, ಸಾಕ್ಷರತೆಯಿಲ್ಲ, ಆಸ್ಪತ್ರೆಗಳಿಲ್ಲ. ಇಂತಹ ಅಸಹಾಯಕ ಜನರು ಮಾನವ-ಕೃತ ಹವಾಮಾನ ಬದಲಾವಣೆಯನ್ನು ಎದುರಿಸಿ ಬದುಕಲಾರರು. ಇಂಥವರಿಗೆ ನೆರವಾಗಲು ಭಾರತ ಸರಕಾರ ಹಣ ಸೃಷ್ಟಿ ವ್ಯವಸ್ಥೆಯನ್ನು ಬದಲಾಯಿಸಲೇ ಬೇಕು. ಮೇಲ್ವರ್ಗದ ಜನ ಇಂಥವರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು, ಈ ಜನರ ಸೇವಕರಾಗಬೇಕು. ನ್ಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ನನ್ನ ಹೊಸ ಕರಡಿನ 73ನೆ ತಿದ್ದುಪಡಿಯ ಅಡಿಯಲ್ಲಿ ವಿಕೇಂದ್ರೀಕೃತ ರಿಸರ್ವ್ ಬ್ಯಾಂಕ್ ಇದು ಸಾಧ್ಯವಾಗುವಂತೆ ಮಾಡಬಲ್ಲದು.
ಕೃಪೆ: countercurrents.org