ಶುದ್ಧೀಕರಣ
ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಬಂದರು.
ಊರಲ್ಲೆಲ್ಲ ಗುಲ್ಲು.
ಓಹೋ ಓಹೋ ಎಂದು ಕೆಲವರು ಬೀದಿಗಿಳಿದರು. ಗೋಮೂತ್ರ ತಂದು ಉಜ್ಜಿದರು.
ಸೆಗಣಿಯಿಂದ ಶುಚೀಕರಿಸಿದರು. ಗಂಗಾಜಲ ತಂದು ಸುರಿದರೂ ಹೋಗುತ್ತಿಲ್ಲ.
ಆ ಧರ್ಮದವರು ಈ ಧರ್ಮದ ಮಂದಿರದೊಳಗೆ ಪ್ರವೇಶಿಸಿ ಸೌಹಾರ್ದವನ್ನು ಉಳಿಸಿ ಹೋಗಿದ್ದಾರೆ.
ಇವರೀಗ ಗೋಮೂತ್ರದಿಂದ, ಸೆಗಣಿಯಿಂದ ಅದನ್ನು ಉಜ್ಜಿ ಅಳಿಸಹೊರಟಿದ್ದಾರೆ.
-ಮಗು
Next Story