ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಜು.6: ಸರಕಾರದ ನಿರ್ದೇಶನದಂತೆ ಪ್ರಾಧಿಕಾರವು ‘ನೀಟ್-2017’ ರಲ್ಲಿ ಅರ್ಹತೆಯನ್ನು ಪಡೆದಿರುವ ಅಖಿಲ ಭಾರತದ ಅಭ್ಯರ್ಥಿಗಳಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಸರಕಾರವು ನೀಡುವ ಸೀಟುಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೆ, ನೋಂದಾಯಿಸಿ ದಾಖಲಾತಿ ಪರಿಶೀಲನೆಯನ್ನು ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
http://kea.kar.nic.in ಆದರೆ, ಅಂತಹ ಅಭ್ಯರ್ಥಿಗಳು ಖಾಸಗಿ, ಅಲ್ಪಸಂಖ್ಯಾತ ಮತ್ತು ಎನ್ಆರ್ಐ ಸೀಟುಗಳಿಗೆ ಅರ್ಹತೆಯನ್ನು ಪಡೆದಿದ್ದರೆ ಅಂತಹ ಸೀಟುಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳನ್ನು ದಾಖಲಾತಿ ಮಾನದಂಡಗಳು, ಮಾಹಿತಿ ಪುಸ್ತಕವನ್ನು ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಚುರಪಡಿಸಲಾಗಿದೆ. ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ಗೆ ಭೇಟಿ ನೀಡಲು ಪ್ರಕಟಣೆಯಲ್ಲಿ ಕೋರಲಾಗಿದೆ.
Next Story