ಶ್ಯಾಮರಾಯ ಆಚಾರ್ಯ
ಮೂಡುಬಿದಿರೆ, ಜು. 14: ಖ್ಯಾತ ನಾಟಿ ಪಶುವೈದ್ಯ ಕಲ್ಲಬೆಟ್ಟು ನಿವಾಸಿ ಶ್ಯಾಮರಾಯ ಆಚಾರ್ಯ (95) ಗುರುವಾರ ಸ್ವಗೃಹದಲ್ಲಿ ನಿಧನರಾದರು.
ವೃತ್ತಿಯಲ್ಲಿ ಸ್ವರ್ಣ ಶಿಲ್ಪಿಯಾಗಿದ್ದ ಅವರು ನಾಟಿ ಪಶುವೈದ್ಯರೆಂದೇ ಗುರುತಿಸಲ್ಪಟ್ಟಿದ್ದರು.
ಪಶುಗಳ ಗುಣಪಡಿಸಲಾಗದ ರೋಗಗಳಿಗೆ ನಾಟಿವೈದ್ಯ ಪದ್ಧತಿಯ ಮೂಲಕ ಅವರು ಗುಣಪಡಿಸುತ್ತಿದ್ದರು. ಉತ್ತಮ ಕೃಷಿಕರೂ ಆಗಿದ್ದರು. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story