ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಚಿನ್ನ ಗೆದ್ದ ಭಾರತದ ಸುಂದರ್ ಸಿಂಗ್ ಗುರ್ಜಾರ್
ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಜಾವೆಲಿನ್ ತ್ರೋ ಸ್ಪರ್ಧೆಯ ಎಫ್46 ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಚಿನ್ನದ ಪದಕ ಗಳಿಸಿದ್ದಾರೆ.
ಸುಂದರ್ ಅವರು 60.36 ಮೀ. ಜಾವೆಲಿನ್ ಎಸೆದಿದ್ದು, ಶ್ರೀಲಂಕಾದ ದಿನೇಶ್ ಪ್ರಿಯಾಂತಾ ಹೆರಾತ್ ಸುಂದರ್ ರಿಂದ 2.43 ಮೀ. ಹಿಂದೆ ಉಳಿದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮುಂದಿನ ದಿನಗಳಲ್ಲಿ ಪ್ರದರ್ಶನವನ್ನು ಇನ್ನೂ ಉತ್ತಮಗೊಳಿಸುತ್ತೇನೆ. ಕ್ರೀಡಾಕೂಟದ ಸಿದ್ಧತೆಯ ಹಿನ್ನೆಲೆಯಲ್ಲಿ 3 ವರ್ಷಗಳಿಂದ ಕುಟುಂಬಸ್ಥರನ್ನು ಭೇಟಿಯಾಗಿಲ್ಲ. ಪದಕ ಗಳಿಸಿರುವ ನಂತರ ಕುಟುಂಬಸ್ಥರನ್ನು ಭೇಟಿಯಾಗುವುದೇ ನಾನು ಮಾಡುವ ಮೊದಲ ಕೆಲಸವಾಗಿದೆ ಎಂದಿದ್ದಾರೆ.
Next Story