ಪುಸ್ತಕ
‘‘ನಾಯಕನಾಗುವುದು ಹೇಗೆ?’’ ಇಂತಹದೊಂದು ಕೃತಿಯ ಸ್ಫೂರ್ತಿ ಮಾರ್ಗ ದರ್ಶನದಲ್ಲಿ ಒಬ್ಬ ಆರ್ಥಿಕವಾಗಿ ಬೆಳೆಯುತ್ತಾ, ದೊಡ್ಡ ಉದ್ಯಮಿಯಾಗಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಯಾದ. ಹೀಗಿರುವಾಗ ಆತನಿಗೆ ತನಗೆ ಸ್ಫೂರ್ತಿ ನೀಡಿದ ಕೃತಿಯ ಲೇಖಕನನ್ನು ಭೇಟಿ ಮಾಡಿ ಅವನಿಂದ ಆಶೀರ್ವಾದ ಪಡೆಯಬೇಕು ಎಂದು ಆಸೆಯಾಯಿತು. ಅವನ ವಿಳಾಸ ಹುಡುಕುತ್ತಾ ನಡೆದ.
ಆದರೆ ಆತನ ಪತ್ತೆಯಿಲ್ಲ. ಕೊನೆಗೆ ಯಾರೋ ಒಬ್ಬರು ‘‘ಓ ಅಲ್ಲಿದ್ದಾರೆ ನೀವು ಹುಡುಕಿಕೊಂಡು ಬಂದವರು...’’ ಎಂದು ತೋರಿಸಿದರು.
ಸಾರಾಯಿ ಅಂಗಡಿಯ ಪಕ್ಕ, ಹರಿದ ಬಟ್ಟೆಯ ಜೊತೆಗೆ ಆತ ಕೆಸರಲ್ಲಿ ಹೊರಳಾಡುತ್ತಿದ್ದ. ಉದ್ಯಮಿಗೆ ಸಂಕಟವಾಯಿತು. ಅವನನ್ನು ತನ್ನದೇ ವಾಹನದಲ್ಲಿ ಸಾಗಿಸಿ, ಮನೆಗೆ ಕರೆದೊಯ್ದು ಉಪಚರಿಸಿದ. ಬಳಿಕ ಕೇಳಿದ ‘‘ಅಂತಹ ಕೃತಿಯನ್ನು ಬರೆದ ನೀವೇಕೆ ಹೀಗೆ?’’
ಲೇಖಕ ವಿಷಾದದಿಂದ ಹೇಳಿದ ‘‘ನಾಯಕನಾಗುವುದು ಹೇಗೆ ಎನ್ನುವ ದಾರಿ ತೋರಿಸುವುದಷ್ಟೇ ನನಗೆ ಗೊತ್ತಿತ್ತು. ಆ ದಾರಿಯನ್ನು ಹಿಂಬಾಲಿಸುವುದಲ್ಲ...’’
Next Story