ಬುತ್ತಿ
ಅವರಿಬ್ಬರು ಬಾಲ್ಯದ ಗೆಳೆಯರು.
ತಮ್ಮ ಇಳಿ ವಯಸ್ಸಿನಲ್ಲಿ ಸಂಧಿಸಿದರು.
ಹಳೆಯ ತುಂಟಾಟಗಳನ್ನು, ನೋವು, ನಲಿವುಗಳ ನೆನಪುಗಳನ್ನು ಹಂಚಿಕೊಳ್ಳ ತೊಡಗಿದರು.
ಆಗ ಆತ ಹೇಳಿದ ‘‘ನಿನಗೆ ಗೊತ್ತಾ? ನಾನು ಹೈಸ್ಕೂಲಿನಲ್ಲಿರುವಾಗ ನಿನ್ನ ಬುತ್ತಿಯ ಊಟವನ್ನು ನಿನಗೆ ಗೊತ್ತಿಲ್ಲದೆ ಒಂದಿಷ್ಟು ಕದ್ದು ತಿನ್ನುತ್ತಿದ್ದೆ. ಒಂದು ಬಾರಿಯೂ ನಿನಗದು ತಿಳಿಯಲೇ ಇಲ್ಲ...’’
ಈತ ನಕ್ಕು ಹೇಳಿದ ‘‘ನನಗದು ಗೊತ್ತಿತ್ತು. ಆದುದರಿಂದಲೇ ಪ್ರತಿ ದಿನ ಬುತ್ತಿಯಲ್ಲಿ ನಿನಗಾಗಿ ನಾನು ಎರಡು ಸೌಟು ಉಪ್ಪಿಟ್ಟು ಅಮ್ಮನಲ್ಲಿ ಜಾಸ್ತಿ ಹಾಕಿಸುತ್ತಿದ್ದೆ...’’
Next Story