ಸಂಜೆ ಡಿಪ್ಲೊಮಾ: ಅರ್ಜಿ ಆಹ್ವಾನ
ಮಂಗಳೂರು, ಆ.3: ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ)ನಲ್ಲಿ ಆರಂಭವಾಗಿರುವ ಸಂಜೆ ಡಿಪ್ಲೊಮಾ ಪ್ರವೇಶಕ್ಕೆ ಖಾಲಿ ಉಳಿದಿರುವ ಸೀಟುಗಳಿಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಲಾಗಿದೆ.
ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸುಗಳಲ್ಲಿ ಸೀಟು ಲಭ್ಯವಿದ್ದು, ಮಂಗಳೂರು ಮಹನಗರಪಾಲಿಕೆ ವ್ಯಾಪ್ತಿಯ ಕಾರ್ಖಾನೆ, ಕೈಗಾರಿಕೆಗಳಲ್ಲಿ ಎಸೆಸೆಲ್ಸಿ ಬಳಿಕ 3 ವರ್ಷಗಳ ಕನಿಷ್ಠ ತಾಂತ್ರಿಕ ಅನುಭವ ಪಡೆದು ಖಾಯಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಆ.7 ಕೊನೆಯ ದಿನವಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story