ನಗರದ ಮಧ್ಯೆ ಇದ್ದ ಗಾಂಧಿ ಪ್ರತಿಮೆ ರಾತ್ರೋ ರಾತ್ರಿ ವಿರೂಪಗೊಂಡಿತ್ತು. ಮರುದಿನ ಅದರ ವಿರುದ್ಧ ಭಾರೀ ಪ್ರತಿಭಟನೆ. ಜನರ ಗುಂಪಿಗೆ ಯಾರೋ ಕಲ್ಲು ತೂರಿದರು. ಅಷ್ಟೇ, ಗಲಭೆ ಸ್ಫೋಟಿಸಿತು. ವಿರೂಪಗೊಂಡ ಗಾಂಧಿ ಪ್ರತಿಮೆಯ ಬುಡದಲ್ಲೇ ಎರಡು ಹೆಣ ಬಿತ್ತು.