ಆರ್ತನಾದ
ಸಂತ ಥಟ್ಟನೆ ಎದ್ದು ಕೂತು ಹೇಳಿದ ‘‘ಆರ್ತನಾದ ಕೇಳಿಸುತ್ತಿದೆ...ಆಲಿಸಿ...’’
ಶಿಷ್ಯರೆಲ್ಲ ಕಿವಿಯಾನಿಸಿದರು. ಇಲ್ಲ, ಅವರಿಗೆ ಏನೂ ಕೇಳಿಸಲಿಲ್ಲ.
‘‘ಯಾರೋ ಭೀಕರವಾಗಿ ಅಳುತ್ತಿದ್ದಾರೆ...ಬನ್ನಿ...’’ ಎಂದ. ಶಿಷ್ಯರಿಗೆ ಏನೇನೂ ಕೇಳಿಸಿರಲಿಲ್ಲ. ಸಂತ ಓಡಿದ. ಶಿಷ್ಯರು ಹಿಂಬಾಲಿಸಿದರು.
ತುಸು ದೂರದಲ್ಲಿ ಒಂದು ಪುರಾತನ ಮರವನ್ನು ಅವರು ಗರಗಸದಿಂದ ಕುಯ್ಯುತ್ತಿದ್ದರು.
ಶಿಷ್ಯರು ಹೇಳಿದರು ‘‘ಗುರುಗಳೇ ಅದು ಆರ್ತನಾದವಲ್ಲ, ಕುಯ್ಯುತ್ತಿರುವ ಗರಗಸದ ಸದ್ದು’’
ಸಂತ ವಿಷಾದದಿಂದ ಹೇಳಿದ ‘‘ಹೌದೇ? ನನಗೇಕೋ ಅದು ಮರದ ಆರ್ತನಾದಂತೆ ಕೇಳಿಸುತ್ತಿದೆ...’’
Next Story