ಅಮಾಯಕ ಹುಡುಗಿಯ ಕೊಲೆ ನಡೆಯಿತು. ಇದೀಗ ಬೀದಿ ಬೀದಿಯಲ್ಲಿ ಪ್ರತಿಭಟನೆ. ‘‘ಕೊಲೆಗಾರರನ್ನು ಬಂಧಿಸಲು ಹೋರಾಟವೇ?’’ ಯಾರೋ ಕೇಳಿದರು. ‘‘ಅಲ್ಲ, ಕೊಲೆಯನ್ನು ತನಿಖೆ ನಡೆಸಬಾರದು ಎಂದು ಪ್ರತಿಭಟನೆ’’ ಇನ್ನಾರೋ ತಣ್ಣಗೆ ಉತ್ತರಿಸಿದರು.