ಡಾ. ನಳಿನಿ ರೈ
ಪುತ್ತೂರು, ಆ.14: ಪುತ್ತೂರಿನ ಖ್ಯಾತ ವೈದ್ಯೆ, ಪುತ್ತೂರು ನಗರದ ಹೊರವಲಯದ ಪರ್ಲಡ್ಕ ‘ಕೈಲಾಸ ನಿಲಯ’ದ ನಿವಾಸಿ ಡಾ.ಬಿ.ನಳಿನಿ ರೈ (82) ಅವರು ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಖ್ಯಾತ ವಕೀಲ ದಿ.ಬೆಳ್ಳಿಪ್ಪಾಡಿ ಬಿ.ಟಿ.ರೈ ಅವರ ಪತ್ನಿ ಡಾ.ನಳಿನಿ ರೈ ಅವರು ಪುತ್ತೂರಿನ ಮೊದಲ ಸ್ತ್ರೀರೋಗ ತಜ್ಞೆಯಾಗಿ ಗುರುತಿಸಿಕೊಂಡಿದ್ದರು. ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆದಿದ್ದ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ 1967ರಿಂದ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಪರ್ಲಡ್ಕದಲ್ಲಿ ಪ್ರತಿಮಾ ನರ್ಸಿಂಗ್ ಹೋಂ ಸ್ಥಾಪಿಸಿ 1967ರಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ಜೊತೆಗೆ ಪುತ್ತೂರಿನ ಕೋರ್ಟು ರಸ್ತೆಯಲ್ಲಿ ಡಾ. ನಳಿನಿ ರೈ ಪ್ರತ್ಯೇಕ ಕ್ಲೀನಿಕ್ ನಡೆಸುತ್ತಿದ್ದರು.
ಮೃತರು ಪುತ್ರರಾದ ಡಾ.ಪ್ರೀತಂ ರೈ, ಡಾ.ಪೃಥ್ವಿರಾಜ್ ರೈ, ಪುತ್ರಿ ಸೇರಿದಂತೆ ಅಪಾ ಬಂಧು ಬಳಗವನ್ನು ಅಗಲಿದ್ದಾರೆ.
Next Story