ಮರಾಠಿ ಕವಯಿತ್ರಿ ಶಿರೀಷ್ ಪೈ ನಿಧನ
ಮುಂಬೈ,ಸೆ.2: ಮರಾಠಿ ಸಾರಸ್ವತ ಲೋಕಕ್ಕೆ ‘ಹಾಯ್ಕು’ವನ್ನು ಪರಿಚಯಿಸಿದ್ದ ಹೆಗ್ಗಳಿಕೆ ಹೊಂದಿದ್ದ ಖ್ಯಾತ ಕವಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಿರೀಷ್ ಪೈ(88) ಅವರು ಶನಿವಾರ ಇಲ್ಲಿ ನಿಧನರಾದರು. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಖ್ಯಾತ ಲೇಖಕ-ಪತ್ರಕರ್ತ ಆಚಾರ್ಯ ಪ್ರಹ್ಲಾದ ಕೇಶವ ಅತ್ರೆ ಅವರ ಪುತ್ರಿಯಾಗಿದ್ದ ಶಿರೀಷ 1929ರಲ್ಲಿ ಜನಿಸಿದ್ದರು.
1975ರಲ್ಲಿ ಹಾಯ್ಕುಗಳನ್ನು ಬರೆಯಲಾರಂಭಿಸಿದ್ದ ಶಿರೀಷ್ ಜಪಾನಿನ 17 ಅಕ್ಷರಗಳ ಹನಿಗವನ ‘ಹಾಯ್ಕು’, ಅದರ ಮೂಲ ಮತ್ತು ಸ್ವರೂಪದ ಬಗ್ಗೆ ಅಧ್ಯಯನ ನಡೆಸಿದ್ದರು. ಮರಾಠಿ ‘ಹಾಯ್ಕು’ಗಳ ಐದು ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು. ಅವರು ಕೆಲವು ಜಪಾನಿ ಹಾಯ್ಕುಗಳನ್ನೂ ಇಂಗ್ಲೀಷ್‌ನಿಂದ ಮರಾಠಿಗೆ ಅನುವಾದಿಸಿದ್ದರು.
‘ಮರಾಠಾ’ ವೃತ್ತಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದ ಅವರು ‘ಸಂಯುಕ್ತ ಮಹಾರಾಷ್ಟ್ರ’ ಆಂದೋಲನದಲ್ಲಿ ಭಾಗಿಯಾಗಿದ್ದರು.
Next Story