ಸೆ.4: ನೇರಳಕಟ್ಟೆಯಲ್ಲಿ ಸುಲ್ತಾನ್ ಹಾಜಿ ಸ್ಮರಣೆ, ಸಖಾಫಿ ಸಂಗಮ
ನೇರಳಕಟ್ಟೆ, ಸೆ. 3: ಇತ್ತೀಚೆಗೆ ನಿಧನರಾದ ಪ್ರಮುಖ ಉದ್ಯಮಿ ಹಾಗೂ ಕೊಡುಗೈ ದಾನಿಯಾಗಿದ್ದ ಕೊಡಾಜೆ ಹುಸೈನ್ ಹಾಜಿ (ಸುಲ್ತಾನ್ ಹಾಜಿ) ಅವರ ಹೆಸರಲ್ಲಿ ಕರ್ನಾಟಕ ಸಖಾಫಿ ಕೌನ್ಸಿಲ್ ಸಂಘಟಿಸುವ ಸಂಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ಸೆ.4ರಂದು ಬೆಳಗ್ಗೆ 10 ಗಂಟೆಗೆ ಮಾಣಿ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಸ್ತ ಕೇರಳ ಸುನ್ನೀ ಯುವಜನ ಸಂಘದ ಅಧ್ಯಕ್ಷ ಮೌಲಾನಾ ಪೇರೋಡ್ ಅಬ್ದುರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಕರ್ನಾಟಕ ಸಖಾಫಿ ಸಂಗಮದ ಮಹಾಸಭೆ ಹಾಗೂ ಮರ್ಕಝ್ ರೂಬೀ ಜುಬಿಲಿ ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ರೂಪೀಕರಣ ನಡೆಯಲಿದೆ ಎಂದು ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story