ಅಶುಭ
ಅಂದು ಮಗನ ಮದುವೆ.
ಹಸೆಮನೆ ಏರಿದ ಮದುಮಗಳು ಅತ್ತೆಯನ್ನು ಕಾಣದೆ ನಾಚಿಕೆ ಬಿಟ್ಟು ಮೆಲ್ಲಗೆ ಭಾವೀ ಪತಿಯ ಬಳಿ ಕೇಳಿದಳು ‘‘ಅತ್ತೆ ಎಲ್ಲಿ?’’
‘‘ಅವಳು ವಿಧವೆ. ಶುಭಕಾರ್ಯದಲ್ಲಿ ಭಾಗವಹಿಸುವಂತಿಲ್ಲ...’’ ಮಗ ಹೇಳಿದ.
‘‘ತಾಯಿಯನ್ನು ಅಶುಭವೆಂದು ಭಾವಿಸುವ ಮಗನನ್ನು ಮದುವೆಯಾಗುವುದು ನನ್ನ ಪಾಲಿಗೆ ಅಶುಭ’ ಎಂದ ಆಕೆ ಎಲ್ಲರೂ ನೋಡುತ್ತಿದ್ದಂತೆ ಹಸೆಮಣೆಯಿಂದ ಎದ್ದು ನಡೆದಳು.
Next Story