varthabharthi


ದಸರಾ ವಿಶೇಷ

ಸೆ.22 ರಿಂದ ಯುವ ದಸರಾ: ಮೊದಲ ಬಾರಿಗೆ ರೆಡ್ ಬುಲ್ ಬಸ್ ಕಾರ್ಯಕ್ರಮ

ವಾರ್ತಾ ಭಾರತಿ : 20 Sep, 2017

ಮೈಸೂರು, ಸೆ.20: ನಾಡಹಬ್ಬ, ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಯುವ ದಸರಾ ಸೆ.22ರಿಂದ 29ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಯುವ ದಸರಾ ಉಪಸಮಿತಿಯ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಯುವ ದಸರಾಗೆ ಚಾಲನೆ ನೀಡುವರು. ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್, ನಾಯಕ ನಟಿ ರಚಿತಾ ರಾಮ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿದಿನ ಸಂಜೆ 6ರಿಂದ 8ರವರೆಗೆ ಯುವ ಸಂಭ್ರಮದಲ್ಲಿ ಪಾಲ್ಗೊಂಡು ಆಯ್ಕೆಯಾಗಿರುವ ತಂಡಗಳು ಪ್ರದರ್ಶನ ನೀಡಲಿವೆ. ಸೆ.22 ರಂದು ದಿಲ್ ಸೇ ದಿಲ್ ತಕ್ ಖ್ಯಾತಿಯ ಫಲಾಕ್ ಮುಚ್ಚಲ್ ಅವರಿಂದ ಕಾರ್ಯಕ್ರಮ, 23ರಂದು ಬಾಲಿವುಡ್ ಖ್ಯಾತ ಹಿನ್ನೆಲೆಗಾಯಕ ನಕಾಶ್ ಅಜೀಜ್ ಅವರಿಂದ ಕಾರ್ಯಕ್ರಮ, 24 ರಂದು ಕೋಕೋ ಕೋಲಾ ಕಂಪೆನಿಯ ಪ್ರಾಯೋಜಿತ ಕಾರ್ಯಕ್ರಮ ಕೋಕ್ ಸ್ಟುಡಿಯೋ, 25ರಂದು ಕೆನರಾ ಬ್ಯಾಂಕ್ ಮತ್ತು ಟಿವಿಎಸ್ ಅವರಿಂದ ಪ್ರಾಯೋಜಿತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮ, 26 ಬಾಲಿವುಡ್ ಹೆಸರಾಂತ ಹಿನ್ನೆಲೆ ಗಾಯಕ ನೀತಿ ಮೋಹನ್ ಅವರಿಂದ ಕಾರ್ಯಕ್ರಮ, 27ರಂದು ಪ್ರಥಮ ಬಾರಿಗೆ ವಿಶ್ವವಿಖ್ಯಾತ ರೆಡ್ ಬುಲ್ ಟೂರ್ ಬಸ್ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ 28 ರಂದು ಸ್ಯಾಂಡಲ್‍ವುಡ್ ನೈಟ್ ಪ್ರಾಯೋಜಿತ ಕಾರ್ಯಕ್ರಮ ನಡೆಯಲಿದ್ದು, 29 ರಂದು ಗಂಧದ ಗುಡಿ ಸ್ಟಾರ್ ನೈಟ್ಸ್ ಪ್ರಾಯೋಜಿತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ಉಪಾಧ್ಯಕ್ಷರಾದ ಹಿನಕಲ್ ನಂಜುಂಡ, ಇಂದನ್ ಹೆಜ್ಜಿಗೆ ಬಾಬು, ಕಾರ್ಯಾಧ್ಯಕ್ಷ ಹಾಗೂ ಪಾಲಿಕೆ ಆಯುಕ್ತ ಜಿ.ಜಗದೀಶ್, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಸದಸ್ಯರಾದ ಜಿ.ಪಂ.ಮಾಜಿ ಸದಸ್ಯ ಚೋಳರಾಜ್, ರವಿಪ್ರಕಾಶ್, ಗಿರೀಶ್ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)