ಜಾತಿ, ಧರ್ಮ ಮೀರಿದ ಸಂಭ್ರಮ ದಸರಾ: ಕವಿ ಪ್ರೊ.ನಿಸಾರ್ ಅಹಮದ್
ಮೈಸೂರು, ಸೆ.21: ದಸರಾ ಜಾತಿ ಧರ್ಮವನ್ನು ಮೀರಿದ ಸಂಭ್ರಮವಾಗಿದೆ. ಇದು ಕನ್ನಡ ಸಂಸ್ಕೃತಿ, ಸಂಪ್ರದಾಯ, ಅಸ್ಮಿತೆಯನ್ನು ಸಾರುತ್ತದೆ ಎಂದು ಎಂದು ಖ್ಯಾತ ಸಾಹಿತಿ ನಿತ್ಯೋತ್ಸ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವವಿಖ್ಯಾತ ನಾಡ ಹಬ್ಬ 407ನೆ ದಸರಾ ಮಹೋತ್ಸವಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮೈಸೂರು ಸಾಂಸ್ಕತಿಕ ನಗರಿ, ರಾಜ ಮಹರಾಜರು ಆಳಿದ ನಾಡು. ವಿಜಯನಗರದ ಅರಸರು 1610ರಲ್ಲಿ ಈ ದಸರಾ ಮಹೋತ್ಸವವನ್ನು ಆಚರಣೆಗೆ ತಂದರು. ಜಯಚಾಮರಾಜೇಂದ್ರ ಒಡೆಯರ್ ಅವರ ಅವಧಿಯಲ್ಲಿ ಎರಡು ವರ್ಷ ದಸರಾ ಆಚರಣೆ ನಿಂತು ಹೋಗಿದ್ದು ಬಿಟ್ಟರೆ ಇನ್ನೆಲ್ಲಾ ಕಾಲದಲ್ಲೂ ನಡೆದುಕೊಂಡು ಬಂದಿದೆ. ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರವಾಗಿ ಬೆಳೆಯುತಿತಿದೆ. ಅಲ್ಲಿ ಕಲೆ ಸಂಸ್ಕತಿಗಳನ್ನು ಬಲಿಕೊಡುತ್ತಿದ್ದೇವೆ. ಆದರೆ ನಮ್ಮ ರಾಜ್ಯದ ಕಲೆ ಸಂಸ್ಕತಿ ಮೈಸೂರಿನಲ್ಲಿ ಉಳಿದಿದೆ ಎಂದು ಹೇಳಿದರು.
ಈ ದಿನ ನನ್ನ ಮಹತ್ವಾಕಾಂಕ್ಷೆಯ ದಿನ ಎಂದ ಅವರು, ಭವ್ಯ ಪರಂಪರೆಯನ್ನು ಸಾರುವ ದಸರಾವನ್ನು ಉದ್ಘಾಟಿಸುವುದು ಸಾಮಾನ್ಯ ಮಾತಲ್ಲ. ನಾನು ಇಲ್ಲಿ ಉತ್ಸವ ಮೂರ್ತಿ ಅಷ್ಟೆ. ನಾನು ಸಾಕಷ್ಟು ಪ್ರಶಸಿತಿಗಳನ್ನು ಸ್ವೀಕರಿಸಿದ್ದೇನೆ. ನನಗೆ ಪದ್ಮಶ್ರೀ, ನಾಡೋಜ ಪ್ರಶಸಿತಿ ಮತುತಿ ಸಮೇಳದ ಅಧ್ಯಕ್ಷ ಸ್ಥಾನಗಳು ಲಭಿಸಿವೆ. ಆದರೆ ಅದೆಲ್ಲಕ್ಕಿಂತ ಹೆಚ್ಚಿನ ಗೌರವ ಈ ಉದ್ಘಾಟನೆ ತಂದು ಕೊಟ್ಟಿದೆ ಎಂದು ಸಂಭ್ರಮಪಟ್ಟರು.
ದ.ರಾ.ಬೇಂದ್ರೆ ಯರ ಕವಿತೆಯ ಜೊತೆಗೆ ತಮ್ಮ ಭಾಷಣ ಅರಂಭಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಫಲತಾಂಬೂಲ ನೆನಪಿನ ಕಾಣಿಕೆ ನೀಡಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಉಮಾಶ್ರೀ, ಯು.ಟಿ.ಖಾದರ್, ರುದ್ರಪ್ಪ ಮಾನಪ್ಪ ಲಮಾಣಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.