'ರೌಂಡ್ ಗ್ಲಾಸ್' ಸಂಸಾರ ಉತ್ಸವ
ಗ್ರ್ಯಾಮಿ ಪ್ರಶಸ್ತಿ ವಿಜೇತ ಹಾಗೂ ಜನಪ್ರಿಯ ಪರಿಸರ ಸಂರಕ್ಷಕ ರಿಕ್ಕಿ ಕೇಜ್ ಬೆಂಗಳೂರಿನಲ್ಲಿ 'ರೌಂಡ್ ಗ್ಲಾಸ್' ಸಂಸಾರ ಉತ್ಸವ ಆಯೋಜಿಸಿದ್ದಾರೆ.
ಉತ್ಸವದ ಕುರಿತಾದ ಮಾಹಿತಿಯನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದರು. "ಅಕ್ಟೋಬರ್ 2 ರಿಂದ 11ರವರೆಗೆ "ರೌಂಡ್ ಗ್ಲಾಸ್" ಸಂಸಾರ ಉತ್ಸವ 2017 ರ ಆತಿಥ್ಯವನ್ನು ರಿಕ್ಕಿ ಕೇಜ್ ನಿರ್ವಹಿಸಲಿದ್ದಾರೆ. ಭಾರತದಲ್ಲಿ ಅತಿ ದೊಡ್ಡದಾದ ಈ ಅಂತಾರಾಷ್ಟ್ರೀಯ ಪರಿಸರ ಉತ್ಸವದಲ್ಲಿ ಪರಿಸರ ಕಲಾ ಪ್ರದರ್ಶನ, ಸಿನಿಮಾ ಪ್ರದರ್ಶನ, ಸಂಗೀತ ಕಛೇರಿಗಳು ಹಾಗೂ ನಾನಾ ವಿಚಾರಗಳ ಬಗ್ಗೆ ಶೃಂಗಸಭೆಗಳು ನಡೆಯಲಿವೆ. ಪರಿಸರ ಮತ್ತು ಸಂರಕ್ಷಣೆಯ ವಿಚಾರದ ಆಧಾರದ ಮೇಲೆ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ವಿಧಾನಸೌಧಕ್ಕೆ 60 ವರ್ಷ ತುಂಬುತ್ತಿರುವ ಐತಿಹಾಸಿಕ ಕ್ಷಣಕ್ಕೆಪೂರಕವಾಗಿ ವಿಧಾನಸೌಧದ ಸುತ್ತಮುತ್ತ ಅನೇಕ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಈ ಉತ್ಸವ ಹಮ್ಮಿಕೊಂಡಿದೆ ಎಂದು ರಿಕ್ಕಿ ಕೇಜ್ ತಿಳಿಸಿದರು. ಇದೇ ಸಂದರ್ಭದಲ್ಲಿ ಚಲಚಿತ್ರಗಳ ಪ್ರದರ್ಶನವೂ ನಡೆಸಲಾಗುತ್ತಿರುವುದು ವಿಶೇಷ.
ಪತ್ರಿಕಾಗೋಷ್ಠಿಯಲ್ಲಿ ಸ್ಮಾರ್ಟರ್ ಧರ್ಮದ ಕಾರ್ತಿಕ್ ಪೊನ್ನಪ್ಪ ಮತ್ತು ಪ್ರೊಫೆಸರ್ ಬಲದೇವ್ ರಾಜ್, ಖ್ಯಾತ ವಿಜ್ಞಾನಿ ಹಾಗೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ನ ಮುಖ್ಯ ಸಲಹೆಗಾರರು ಉಪಸ್ಥಿತರಿದ್ದರು.