ಈ ದಿನ
ಅಕ್ಷರಧಾಮ ಮಂದಿರದ ಮೇಲೆ ಉಗ್ರರ ದಾಳಿ
2002: ಗುಜರಾತ್ ರಾಜಧಾನಿ ಗಾಂಧಿನಗರದ ಅಕ್ಷರಧಾಮ ಎಂಬ ಮಂದಿರದ ಮೇಲೆ ಈ ದಿನ ಇಬ್ಬರು ಭಯೋತ್ಪಾದಕರು ಗ್ರೆನೇಡ್ ಮತ್ತು ಬಂದೂಕುಗಳಿಂದ ದಾಳಿ ಮಾಡಿದರು. ಈ ದಾಳಿಯಲ್ಲಿ 30 ಜನರು ಮರಣ ಹೊಂದಿದ್ದಲ್ಲದೆ, 80 ಜನ ಗಾಯಗೊಂಡರು. ಕೊನೆಗೆ ರಾಷ್ಟ್ರೀಯ ಭದ್ರತಾ ಪಡೆ ಮತ್ತು ಉಗ್ರರ ನಿಗ್ರಹ ವಿಶೇಷ ತರಬೇತಿಯ ‘ಬ್ಲಾಕ್ ಕ್ಯಾಟ್’ ಪಡೆ ಕಾರ್ಯಾಚರಣೆ ಕೈಗೊಂಡು ಈ ಇಬ್ಬರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾದವು. ಲಷ್ಕರೆ ತಯ್ಯಿಬಾ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
►1688: ಫ್ರಾನ್ಸ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿತು.
►1941: ಉಕ್ರೇನ್ ದೇಶದ ಕೀವ್ ನಗರದ ಜರ್ಮನ್ ಪ್ರಧಾನ ಕಾರ್ಯಾಲಯದಲ್ಲಿ ಬಾಂಬ್ ಸ್ಫೋಟದಿಂದಾಗಿ ನೂರಾರು ಜನ ಮೃತಪಟ್ಟರು.
►1963: ಬ್ರಿಟನ್ ಮತ್ತು ರಷ್ಯಾ ಜೊತೆಗಿನ ಅಣುಬಾಂಬ್ ಪರೀಕ್ಷೆ ಮಿತಿಗೊಳಪಡಿಸುವ ಒಪ್ಪಂದಕ್ಕೆ ಅಮೆರಿಕ ಸೆನೆಟ್ ಈ ದಿನ ಒಪ್ಪಿಗೆ ನೀಡಿತು.
► 1966: ಕೆರಿಬಿಯನ್, ಫ್ಲೋರಿಡಾ ಮತ್ತು ಮೆಕ್ಸಿಕೊಗಳಲ್ಲಿ ಇಲ್ನೆಝ್ ಎಂಬ ಚಂಡಮಾರುತದಿಂದ 293 ಜನ ಮೃತಪಟ್ಟರು.
► 1994: ಮ್ಯಾನ್ಮಾರ್‌ನಲ್ಲಿ ಸರ್ವಾಧಿಕಾರದ ವಿರುದ್ಧ ಹೋರಾಡಲು ಆ್ಯಂಗ್‌ಸಾನ್ ಸೂಕಿ ಮತ್ತು ಅವರ ಸಹಚರರಿಂದ ರಾಷ್ಟ್ರೀಯ ಪ್ರಜಾಪ್ರಭುತ್ವ ಲೀಗ್ ಸ್ಥಾಪಿಸಲ್ಪಟ್ಟಿತು.
►2014: ತನ್ನ ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿದ ಪ್ರಥಮ ದೇಶವಾಗಿ ಭಾರತ ಈ ದಿನ ಹೊರಹೊಮ್ಮಿತು.
►2002: ಭಾರತದ ಪವನ ವಿಜ್ಞಾನಿ, ಭಾರತದ ದೂರ ಸಂವೇದಿಯ ಜನಕ ಎಂದೇ ಕರೆಯಲ್ಪಡುವ ಕೇರಳದ ಡಾ.ಪಿ.ಆರ್. ಪಿಶರೋಟಿ ನಿಧನರಾದರು