ದಸರಾ ವೀಕ್ಷಣೆಗೆ ಸುವರ್ಣ ರಥ ರೈಲಿನಲ್ಲಿ ಬಂದ ಪ್ರವಾಸಿಗರು: ಜಿಲ್ಲಾಡಳಿತದಿಂದ ಸ್ವಾಗತ
ಮೈಸೂರು, ಸೆ.24: ಸುವರ್ಣ ರಥ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಐಷಾರಾಮಿ ಪ್ರವಾಸ ಯೋಜನೆ. ದಸರಾ ಮಹೋತ್ಸವದ ವಿಶೇಷವಾಗಿ ನಿಗಮ ಬೆಂಗಳೂರಿನಿಂದ ಮೈಸೂರಿಗೆ ಒಂದು ದಿನದ ಪ್ಯಾಕೇಜ್ ಟ್ರಿಪ್ ಆಯೋಜಿಸಿದ್ದು 20 ಪ್ರವಾಸಿಗರು ರವಿವಾರ ಮೈಸೂರಿಗೆ ಆಗಮಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಾಂಪ್ರದಾಯಿಕವಾಗಿ ತಿಲಕ ಇಟ್ಟು, ಮಲ್ಲಿಗೆ ಹೂವು, ಗುಲಾಬಿ ಕೊಟ್ಟು ಜಾನಪದ ಕಲೆಗಳಾದ ವೀರಗಾಸೆ ಮತ್ತು ಕಂಸಾಳೆಯೊಂದಿಗೆ ಅಶೋಕಪುರಂ ರೈಲು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಪ್ರವಾಸಿಗರು ಜಾನಪದ ತಂಡಗಳೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಆನಂದಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್, ದಸರಾ ವಿಶೇಷಾಧಿಕಾರಿ ಡಿ. ರಂದೀಪ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೆಶಕ ಎಚ್.ಪಿ.ಜನಾರ್ದನ್ ಅವರುಗಳು ಪ್ರವಾಸಿಗರಿಗೆ ಗೋಲ್ಡ್ ಕಾರ್ಡ್ ನೀಡಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಮ್ಮಯ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸ್ವಾಗತ ಕೋರಿದರು.
ಬೆಂಗಳೂರಿನಿಂದ ಶನಿವಾರ ರಾತ್ರಿ 8:30ಕ್ಕೆ ಪ್ರಯಾಣ ಆರಂಭಿಸಿದ ಸುವರ್ಣ ರಥ ಮೈಸೂರಿಗೆ ರವಿವಾರ ಬೆಳಗ್ಗೆ 8:30ಕ್ಕೆ ಆಗಮಿಸಿತು, 20 ಪ್ರವಾಸಿಗರು ಮೊದಲ ದಸರಾ ಮಹೋತ್ಸವ ವಿಶೇಷ ಪ್ಯಾಕೇಜ್‍ನಲ್ಲಿ ನಗರಕ್ಕೆ ಆಗಮಿಸಿದ್ದಾರೆ.
ಈ ವೇಳೆ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಕುಮಾರ್ ಪುಷ್ಕರ್ ಮಾತನಾಡಿ, ಕಳೆದ ಬಾರಿ ದಸರೆಯಲ್ಲಿ ಐದು ಟ್ರಿಪ್ ಮಾಡಬೇಕಿತ್ತು ಆದರೆ ಸಾದ್ಯವಾಗಲಿಲ್ಲ. ಈ ಬಾರಿ ಎರಡು ದಿನಗಳ ಪ್ರವಾಸ ಆಯೋಜಿಸಿದ್ದೇವೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದ ಅವರು, ಇಂದು 20 ಪ್ರವಾಸಿಗರು ಬಂದಿದ್ದಾರೆ. ಮುಂದಿನ ವಾರ ಅಂದರೆ ಸೆಪ್ಟಂಬರ್ 29 ರಂದು 80 ಜನ ಪ್ರವಾಸಿಗರು ಸುವರ್ಣ ರಥ ಪ್ರವಾಸಕ್ಕೆ ಟಿಕೇಟ್ ಖರೀದಿಸಿದ್ದಾರೆ. ಈ ಅಭೂತಪೂರ್ವ ಪ್ರತಿಕ್ರಯೆ ನಮಗೆ ಮುಂದೆ ಕಿರು ಪ್ಯಾಕೇಜ್‍ಗಳನ್ನು ಆಯೋಜಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಮಾತನಾಡಿ, ಅರಮನೆ ನಗರಿಗೆ ಆತ್ಮೀಯ ಸ್ವಾಗತ ಕೊರಿದ್ದೇವೆ, ಗೋಲ್ಡ್ ಕಾರ್ಡ್ ವಿತರಿಸಿದೆವು. ಪ್ರವಾಸಿಗರು ಇಂದು ಶ್ರೀರಂಗಪಟ್ಟಣ, ಚಾಮುಂಡಿ ಬೆಟ್ಟ, ಮಧ್ಯಾಹ್ನ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಭೋಜನ ಸವಿಯಲಿದ್ದಾರೆ ಹಾಗೂ ಇತರ ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಸಂಜೆ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂದರು.