ದಸರಾ ಮಹೋತ್ಸವ: ಪಂಜಕುಸ್ತಿಗೆ ಚಾಲನೆ
ಮೈಸೂರು, ಸೆ.25: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಐದನೇ ದಿನಕ್ಕೆ ಕಾಲಿರಿಸಿದೆ.
ಕುಸ್ತಿ ಉಪಸಮಿತಿ ವತಿಯಿಂದ 3ನೆ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಪಂಜಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂಜಕುಸ್ತಿ ಪಂದ್ಯಾವಳಿಗೆ ದಕ್ಷಿಣ ವಯಲ ಐಜಿಪಿ ವಿಫುಲ್ ಕುಮಾರ್ ಚಾಲನೆ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಪಂಜಕುಸ್ತಿಯ ಅಣುಕು ಪ್ರದರ್ಶನದ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್ ಎಂ.ಜೆ. ರವಿಕುಮಾರ್, ಎಸ್ಪಿ ರವಿ ಚನ್ನಣ್ಣನವರ್, ಪಾಲಿಕೆ ಆಯುಕ್ತ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು. ನೂರಾರು ಪಂಜಕುಸ್ತಿ ಮಹಿಳಾ ಮತ್ತು ಪುರುಷರ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ರೀಟಾ ಪ್ರಿಯಾಂಕ ಭಾಗವಹಿಸಿದ್ದರು.
Next Story