ದಸರಾ ಮಹೋತ್ಸವ: ಅರಮನೆ ಆವಣರದಲ್ಲಿ ಆನೆಗಳ ತಾಲೀಮಿಗೆ ಚಾಲನೆ
ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ
ಮೈಸೂರು,ಸೆ.26: ವಿಶ್ವ ವಿಖ್ಯಾತ ನಾಡ ಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ನಾಲ್ಕು ದಿನ ಮಾತ್ರ ಬಾಕಿಯಿದ್ದು, ಜಂಬೂ ಸವಾರಿಯ ಮೊದಲ ತಾಲೀಮಿಗೆ ಅಧಿಕಾರಿಗಳು ಪುಷ್ಪಾರ್ಚನೆ ಮೂಲಕ ಅರಮನೆ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ಸೆ.30 ರಂದು ವಿಜಯದಶಮಿ ದಿನಕ್ಕೆ ಅರಮನೆ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡುವ ತಾಲೀಮನ್ನ ಇಂದು ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಅಂಬಾರಿ ಹೊರುವ ಅರ್ಜುನ ಆನೆಗೆ ತಾಲೀಮು ನಡೆಸಿದರು.
ಅರಮನೆ ಅಂಗಳದಲ್ಲಿ ಜಂಬೂ ಸವಾರಿಯ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ಸೇರಿದಂತೆ ಜಂಬೂ ಪಡೆಯ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು. ಇದರ ಜೊತೆಗೆ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಹೆಜ್ಜೆ ಹಾಕಿದರು.
ಅಶ್ವಾರೋಹಿ ಪಡೆ ಸೇರಿ ವಿವಿಧ ಪಡೆಗಳ ತಾಲೀಮಿಗೆ ಲಯ ಬದ್ಧವಾಗಿ ಹೆಜ್ಜೆ ಹಾಕಿದವು. ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಹಿನ್ನೆಲೆ ಅರಮನೆಯಲ್ಲಿ ವೇದಿಕೆ ನಿರ್ಮಿಸಿ ತಾಲೀಮು ನಡೆಸಲಆಯಿತು. ಕೋಟೆ ಮಾರಮ್ಮನ ದೇವಸ್ಥಾದ ಬಳಿ ತಾಲೀಮು ನಡೆಸುವ ವೇಳೆ ಸಿಡಿಮದ್ದು ಸಿಡಿಸಿ ಗಜ ಪಡೆಗಳಿಗೆ ತಾಲೀಮು ಮಾಡಿಸಲಾಯಿತು.
ಸೆ.28ಕ್ಕೆ ಅಂತಿಮ ತಾಲೀಮು: ಜಂಬೂ ಸವಾರಿಗೆ 2 ದಿನ ಬಾಕಿ ಇರುವಾಗಲೇ ಈ ಬಾರಿ ಸ್ತಬ್ಧ ಚಿತ್ರಗಳೊಂದಿಗೆ ಅಂತಿಮ ಹಂತದ ತಾಲೀಮು ನಡೆಸಬೇಕೆಂದು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.