ಮೈಸೂರು ದಸರಾ: ಯೋಗ ಚಾರಣಕ್ಕೆ ಚಾಲನೆ
ಮೈಸೂರು, ಸೆ.26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರನೆ ದಿನಕ್ಕೆ ಕಾಲಿಟ್ಟಿದ್ದು, ಯೋಗ ದಸರಾ ಉಪಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.
ಬೆಳಗ್ಗೆ 5.45ಕ್ಕೆ ಯೋಗ ದಸರಾ ಉಪಸಮಿತಿಯಿಂದ ಆಯೋಜಿಸಿದ್ದ ಯೋಗ ಚಾರಣಕ್ಕೆ ಮಂಗಳವಾರ ಚಾಮುಂಡಿ ಪಾದದ ಬಳಿ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದ್ದು, 500 ಕ್ಕೂ ಹೆಚ್ಚು ಯೋಗ ಪಟುಗಳು ಚಾಮುಂಡಿ ಬೆಟ್ಟವನ್ನ ಅತ್ಯಂತ ಉತ್ಸಾಹ ಹಾಗೂ ವೇಗದಿಂದ ಏರಿದರು.
ನಗರದ ವಿವಿಧ ಯೋಗ ಕೇಂದ್ರಗಳಿಂದ ಸುಮಾರು 500ಕ್ಕೂ ಹೆಚ್ಚು ಯೋಗ ಪಟುಗಳು ಯೋಗ ಚಾರಣಕ್ಕೆ ಆಗಮಿಸಿದ್ದು, ಚಾಮುಂಡಿ ಬೆಟ್ಟದ 1000 ಮೆಟ್ಟಿಲುಗಳನ್ನ ಹತ್ತುವ ಮೂಲಕ ಯೋಗ ಚಾರಣಕ್ಕೆ ಮೆರಗು ತಂದರು. ನಂತರ ಚಾಮುಂಡಿ ಬೆಟ್ಟದ ಆವರಣದಲ್ಲಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.
ಯೋಗ ಚಾರಣದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು 70 ವರ್ಷದ ವಯಸ್ಸಿನ ಹಿರಿಯರು ಭಾಗಿಯಾಗಿದ್ದರು. ಇವರೊಂದಿಗೆ ವಿದ್ಯಾರ್ಥಿಗಳು ಸಾರ್ವಜನಿಕರು ಜೊತೆಯಲ್ಲಿ ನಡೆದರು.
Next Story