ಭಾರತದಲ್ಲಿ ಬಿಡುಗಡೆಯಾಗಿದೆ ವಿಶ್ವದ ಮೊದಲ ‘ಫಿಜೆಟ್ ಸ್ಪಿನ್ನರ್ ಫೋನ್’
ಹೊಸದಿಲ್ಲಿ, ಸೆ.27: ವಿಶ್ವದ ಮೊದಲ ಫಿಜೆಟ್ ಸ್ಪಿನ್ನರ್ ಫೀಚರ್ ಫೋನೊಂದನ್ನು ಹಾಂಕಾಂಗ್ ಮೂಲದ ಮೊಬೈಲ್ ಟೆಕ್ನಾಲಜಿ ಕಂಪೆನಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.
‘ಕೆ188’ ಎಂಬ ಹೆಸರಿನ ಈ ಮೊಬೈಲ್ ಬೆಲೆ 1,200ರಿಂದ 1,300 ರೂ,ಗಳಾಗಿದೆ. ಸ್ಮಾರ್ಟ್ ಫೋನ್ ಗಳಿಗೆ ಬ್ಲೂಟೂತ್ ಆಗಿಯೂ ಈ ಗ್ಯಾಜೆಟ್ ಕೆಲಸ ಮಾಡುತ್ತದೆ.
280 ಎಂಎಎಚ್ ಬ್ಯಾಟರಿ ಇದರಲ್ಲಿದ್ದು, 8 ಜಿಬಿ ಎಕ್ಸ್ ಪಾಂಡೇಬಲ್ ಮೆಮರಿ ಸಾಮರ್ಥ್ಯವನ್ನೂ ಹೊಂದಿದೆ. ಇಂಟರ್ನೆಟ್ ಸಹಿತ ಮಲ್ಟಿಮೀಡಿಯಾ ಆಪ್ಶನ್ ಗಳಾದ ಚಿತ್ರಗಳು, ವಿಡಿಯೋಗಳು ಹಾಗೂ ಮ್ಯೂಸಿಕ್ ಗಳು ಇದರಲ್ಲಿದೆ.
ಕಂಪೆನಿಯು ‘ಎಫ್05’ ಎಂಬ ಫೋನನ್ನು ಕೂಡ ಲಾಂಚ್ ಮಾಡಿದ್ದು, ಇದರಲ್ಲಿ ಎ-ಜಿಪಿಎಸ್ ತಂತ್ರಜ್ಞಾನವಿದೆ. ಇದರ ಬೆಲೆ 1,500ರಿಂದ 1,700 ರೂ. ಆಗಿದೆ.
Next Story